For the best experience, open
https://m.justkannada.in
on your mobile browser.

ಮೈಸೂರಿನ ಜಯಲಕ್ಷ್ಮಿ ವಿಲಾಸ ಅರಮನೆ ಪುನರುಜ್ಜೀವನಕ್ಕೆ ಕಡೆಗೂ ಕೂಡಿ ಬಂತು ಕಾಲ.

02:11 PM Jan 04, 2024 IST | prashanth
ಮೈಸೂರಿನ ಜಯಲಕ್ಷ್ಮಿ ವಿಲಾಸ ಅರಮನೆ ಪುನರುಜ್ಜೀವನಕ್ಕೆ ಕಡೆಗೂ ಕೂಡಿ ಬಂತು ಕಾಲ

ಮೈಸೂರು ,ಜನವರಿ,4,2024(www.justkannada.in): ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿ ವಿಲಾಸ ವಿಲಾಸ ಅರಮನೆಯ ಪುನರುಜ್ಜೀವನಕ್ಕೆ ಕಡೆಗೂ ಕಾಲ ಕೂಡಿ ಬಂದಿದೆ.

ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿರುವ ಜಯಲಕ್ಷ್ಮಿ ವಿಲಾಸ ಅರಮನೆ ಪಾರಂಪರಿಕ ಕಟ್ಟಡವಾಗಿದ್ದು, ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್ ನ ಜಾನಪದ ವಸ್ತುಸಂಗ್ರಹಾಲಯ ಸಂರಕ್ಷಣಾ ಯೋಜನೆಗೆ US ಮಿಷನ್  ಬೆಂಬಲ ನೀಡಿದೆ.

ಮೈಸೂರು ವಿವಿ, ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಹಾಗೂ ಷಾ ಫೌಂಡೇಶನ್ ಗಳ ಸಂಯುಕ್ತಾಶ್ರಯದಲ್ಲಿ ಜಯಲಕ್ಷ್ಮಿ ವಿಲಾಸ ಅರಮನೆಯ ಸಂರಕ್ಷಣಾ ಕಾರ್ಯ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದ್ದು, 5 ರಿಂದ 7 ವರ್ಷಗಳ ಅವಧಿಯಲ್ಲಿ ಸಂರಕ್ಷಣಾ ಕಾರ್ಯ ಮುಗಿಯಲಿದೆ.

ಪಾರಂಪರಿಕ ಕಟ್ಟಡದ ಸಂರಕ್ಷಣೆ ಕಾರ್ಯಕ್ಕಾಗಿ ನುರಿತ ಪಾರಂಪರಿಕ ತಜ್ಞರು, ಅನುಭವಿಗಳನ್ನು ಒಳಗೊಂಡ ಸಮಿತಿಯನ್ನ ಮೈಸೂರು ವಿವಿ ರಚನೆ ಮಾಡಿದ್ದು, ಈ ಸಂಬಂಧ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಇಂದು ಒಡಂಬಡಿಕೆ ಕಾರ್ಯ‌ ನಡೆಯಿತು.

ಚೆನ್ನೈನ ಯು ಎಸ್ ಕಾನ್ಸಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯು ಹಾಡ್ಸಜ್ ನೇತೃತ್ವದ ತಂಡ ಹಾಗೂ ಷಾ ಫೌಂಡೇಶನ್ ನ ಹರೀಶ್ ಮತ್ತು ಬೀನಾ ಅವರನ್ನೊಳಗೊಂಡ ತಂಡದ ಜೊತೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್ ಕೆ ಲೋಕನಾಥ್ ಒಡಂಬಡಿಕೆ ಮಾಡಿಕೊಂಡರು. ಬಳಿಕ ಈ ಕುರಿತು ಪ್ರೊ. ಎನ್. ಕೆ ಲೋಕನಾಥ್ ಮಾಹಿತಿ ನೀಡಿದರು.

Key words: revival -Jayalakshmi Vilasa -Palace – Mysore university

Tags :

.