For the best experience, open
https://m.justkannada.in
on your mobile browser.

ಬದುಕಿನಲ್ಲಿ ಶಿಕ್ಷಕರ ಹಾಗೂ ವೈದ್ಯರ ಪಾತ್ರ ದೊಡ್ಡದು- ಶಿಕ್ಷಣ ತಜ್ಞರಾದ ಉಷಾ ರಘುಪತಿ ನುಡಿ.

04:51 PM Jan 29, 2024 IST | prashanth
ಬದುಕಿನಲ್ಲಿ ಶಿಕ್ಷಕರ ಹಾಗೂ ವೈದ್ಯರ ಪಾತ್ರ ದೊಡ್ಡದು  ಶಿಕ್ಷಣ ತಜ್ಞರಾದ ಉಷಾ ರಘುಪತಿ ನುಡಿ

ಮೈಸೂರು,ಜನವರಿ,29,2024(www.justkannada.in): ಶಿಕ್ಷಕರು ಜೀವನ ಕಟ್ಟಿಕೊಟ್ಟರೇ ಆ ಜೀವನವನ್ನು  ಆರೋಗ್ಯಕರವಾಗಿಡಲು ನಿರಂತರವಾಗಿ ಶ್ರಮಿಸುತ್ತಾರೆ. ಹಾಗಾಗಿ ಇಬ್ಬರ ಪಾತ್ರ ಬಹಳ ದೊಡ್ಡದು ಎಂದು ಶಿಕ್ಷಣ ತಜ್ಞರಾದ ಉಷಾ ರಘುಪತಿ ಅವರು ತಿಳಿಸಿದರು.

ಇಂದು EcosySTEM ಟೀಚರ್ ಆಫ್ ದಿ ಇಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರೊಂದಿಗೆ ಮಕ್ಕಳು 10  ವರ್ಷ ತಮ್ಮ ಜೀವನವನ್ನು ಶಾಲೆಯಲ್ಲಿ  ಕಲಿಯುತ್ತಾರೆ. 21 ನೇ ಶತಮಾನದ ಕೌಶಲ್ಯದ ಕುರಿತು EcosysSTEM ಅತ್ಯುತ್ತಮವಾಗಿ ಶಿಕ್ಷಕರಿಗೆ ಬೇಕಾದ ಕೌಶಲ್ಯವನ್ನು ನೀಡಿ ಆ ಮೂಲಕ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಈ ವರ್ಷದ ಯುವ ಚಿಂತನಾ ಫೌಂಡೇಶನ್ ಹಾಗೂ ಕ್ವೆಸ್ಟ್ ಅಲೈಯನ್ಸ್ ಸಹಯೋಗದೊಂದಿಗೆ ಮೈಸೂರು ಜಿಲ್ಲೆಯ ಎಂಟು STEM ಶಿಕ್ಷಕರಿಗೆ 2023-2024 ರ  EcosySTEM ಟೀಚರ್ ಆಫ್ ದಿ ಇಯರ್  ಪ್ರಶಸ್ತಿಯನ್ನು ಇಂದು ಮೈಸೂರಿನ ರೋಟರಿ ಭವನದಲ್ಲಿ ನೀಡಲಾಯಿತು. ತೀರ್ಪುಗಾರರು ನಾಮನಿರ್ದೇಶನ ಮಾಡಿದ ಮತ್ತು ಶಾಲಾ ತರಬೇತುದಾರರಿಂದ ನಾಮನಿರ್ದೇಶನಗೊಂಡ ಮೂರು ವಿಶೇಷ STEM ಶಿಕ್ಷಕರು, STEM ಚಾಂಪಿಯನ್‌ ಗಳಾಗಿ ಶ್ರೇಷ್ಠತೆಯನ್ನು ಪ್ರದರ್ಶಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ.ಜೆ.ವಿ ನಂದನ ಕುಮಾರ್, ಹೆಚ್ಚುವರಿ ನಿರ್ದೇಶಕರು (ನಿವೃತ್ತ )ಗಣಿ ಇಲಾಖೆ, GOK, ಹಾಗೂ ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞರಾದ ಬೆಳ್ಳ ಶೆಟ್ಟಿ ಹಾಗೂ ಕ್ವೆಸ್ಟ್ ಅಲ್ಲನ್ಸ್ ನ ಅನಿತಾ ಮೀರಿ ಹಾಗೂ ಯುವ ಚಿಂತನ ಫೌಂಡೇಶನ್ ನ ಸುಷ್ಮಾ ಗೌಡ ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಶಸ್ತಿ ಪ್ರದಾನ ನಂತರ ಪ್ರಶಸ್ತಿ ವಿಜೇತರೊಂದಿಗೆ ಸಂವಾದ ನಡೆಯಿತು ಹಾಗೂ ಮಕ್ಕಳು ಶಾಲೆಯಲ್ಲಿ ಮಾಡಿದ್ದ ವಿಜ್ಞಾನದ ಮಾಡೆಲ್ ಗಳನ್ನು ಪ್ರದರ್ಶಿಸಿದರು.

Key words:  role -teachers - doctors -big in life - Education expert -Usha Raghupathi

Tags :

.