ಮದ್ಯಪ್ರಿಯರಿಗೆ ಶಾಕ್ : ಇಂದಿನಿಂದ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ಬಂದ್.
ಮೈಸೂರು,ಜೂನ್,1,2024 (www.justkannada.in): ಮದ್ಯಪ್ರಿಯರಿಗೊಂದು ಶಾಕಿಂಗ್ ನ್ಯೂಸ್ ಕಾದಿದ್ದು ಜೂನ್ 4 ರಂದು ಲೋಕಸಭಾ ಚುನಾವಣೆ ಮತ ಎಣಿಕೆ ಮತ್ತು ಜೂನ್ 3 ರಂದು ಪರಿಷತ್ ಚುನಾವಣೆ ಹಿನ್ನೆಲೆ ಇಂದಿನಿಂದ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ಬಂದ್ ಆಗಲಿದೆ.
ಜೂನ್1 ರಿಂದ ಜೂನ್ 4 ರವರಗೆ ಮದ್ಯದಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ಮೈಸೂರು ಜಿಲ್ಲೆಯಾದ್ಯಂತ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳು ಮುಚ್ಚಲಿದ್ದು, ಜೂನ್ 5 ಮುಂಜಾನೆ ಮದ್ಯದಂಗಡಿಗಳನ್ನ ಓಪನ್ ಮಾಡಲು ಅವಕಾಶ ನೀಡಲಾಗಿದೆ.
ಇಂದು ಸಂಜೆ 4 ಗಂಟೆವರೆಗೆ ಮಾತ್ರ ಮದ್ಯಮಾರಾಟಕ್ಕೆ ಅವಕಾಶವಿದ್ದು, ಎಣ್ಣೆ ಅಂಗಡಿಗಳತ್ತ ಮದ್ಯಪ್ರಿಯರು ದೌಡಾಯಿಸಿದ್ದಾರೆ. ನಾಲ್ಕು ದಿನಗಳಿಗೆ ಬೇಕಾದಷ್ಟು ಪಾರ್ಸೆಲ್ ತೆಗೆದುಕೊಳ್ಳಲು ಕೆಲವು ಮದ್ಯಪ್ರಿಯರು ಮುಂದಾಗಿದ್ದಾರೆ.
ಇನ್ನು ಸರ್ಕಾರದ ನಡೆಗೆ ಕೆಲವು ಕೂಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ದುಡಿದು ಇಂದು ತಿನ್ನುವ ನಮ್ಮಂತವರಿಗೆ ಹಣ ಎಲ್ಲಿಂದ ಬರಬೇಕು. ಸರ್ಕಾರ ಮಾಡುವ ತೆಗೆದುಕೊಳ್ಳುವ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮದ್ಯದ ದರ ಏರಿಕೆ ಮಾಡಿ ಗ್ಯಾರಂಟಿ ಯೋಜನೆ ಅಂತ ಮಹಿಳೆಯರಿಗೆ ಕೊಡುತ್ತಿದೆ. ಸರ್ಕಾರ ಗಂಡಸರಿಗೆ ಏನೂ ಒಳ್ಳೆ ಕೆಲಸ ಮಾಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಸರ್ಕಾರದ ಆದೇಶವನ್ನ ನಾವು ಪಾಲಿಸುತ್ತೇವೆ ಎನ್ನುತ್ತಿದ್ದಾರೆ ಮದ್ಯದಂಗಡಿ ಮಾಲೀಕರು.
Key words: Sale, alcohol, bandh, four days