HomeBreaking NewsLatest NewsPoliticsSportsCrimeCinema

ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಹೊರಡಿಸಲಾದ ಭೂಮಿಯನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ.

02:57 PM Aug 13, 2024 IST | mahesh

 

If the government has issued a preliminary notification for acquisition of any land for any purpose, no person shall sell such land for which the notification has been issued, donation, purchase, lease, mortgage lease or alienation/transfer in any form is prohibited under the "Karnataka Land (Restriction on Transfer) Act, 1991".

ಮೈಸೂರು,ಆ.13,2024: (www.justkannada.in news)  ಯಾವುದೇ ಉದ್ದೇಶಕ್ಕಾಗಿ ಸರಕಾರವು ಯಾವುದೇ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಾಥಮಿಕ ನೋಟಿಫಿಕೇಷನ್ ಹೊರಡಿಸಿದ್ದರೆ,  ನೋಟಿಫಿಕೇಷನ್ ಹೊರಡಿಸಿದ ಅಂತಹ ಭೂಮಿಯನ್ನು ಯಾವುದೇ ವ್ಯಕ್ತಿಗಳು ಮಾರುವಂತಿಲ್ಲ,ದಾನ,ಕ್ರಯ ಭೋಗ್ಯ ಅಡಮಾನ ಗುತ್ತಿಗೆ ಅಥವಾ ಯಾವುದೇ ರೂಪದಲ್ಲಿ ಪರಭಾರೆ/ವರ್ಗಾವಣೆ ಮಾಡುವುದನ್ನು "ಕರ್ನಾಟಕ ಭೂ (ವರ್ಗಾವಣೆ ಮೇಲೆ ನಿರ್ಬಂಧ) ಅಧಿನಿಯಮ, 1991 ಅನ್ವಯ ನಿಷೇಧಿಸಲಾಗಿದೆ.

ಈ ಅಧಿನಿಯಮದ ಅನ್ವಯ ಸರ್ಕಾರವು ನೋಟಿಫಿಕೇಷನ್ ಮೂಲಕ ಸ್ವಾಧೀನಪಡಿಸಿಕೊಂಡಿರುವ  ಭೂಮಿಗಳ ವರ್ಗಾವಣೆಯ ಮೇಲೆ ನಿಷೇಧ ಹೇರಲಾಗಿದೆ.

ಭೂ ಸ್ವಾಧೀನ ಅಧಿನಿಯಮ, 1894 (1894ರ ಕೇಂದ್ರಾಧಿನಿಯಮ 1)ರ ಅಥವಾ ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಉಪಬಂಧ ಕಲ್ಪಿಸುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಸರ್ಕಾರವು ನೋಟಿಫಿಕೇಷನ್ ಹೊರಡಿಸಿರುವ ಯಾವುದೇ ನಗರ ಪ್ರದೇಶದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗಳ ವರ್ಗಾವಣೆಯ ಮೇಲೆ ನಿಷೇಧ ಹೇರಲಾಗಿದೆ.

ಸರ್ಕಾರವು ಸ್ವಾಧೀನಪಡಿಸಿಕೊಳ್ಳಲು ನೋಟಿಫಿಕೇಷನ್ ಹೊರಡಿಸಿರುವ ಯಾವುದೇ ನಗರ ಪ್ರದೇಶದಲ್ಲಿ ಇರುವ ಯಾವುದೇ ಭೂಮಿ ಅಥವಾ ಅದರ ಭಾಗವನ್ನು ಮಾರಾಟ, ಅಡಮಾನ, ದಾನ, ಗುತ್ತಿಗೆ, ಅಥವಾ ಅನ್ಯಥಾ ವರ್ಗಾವಣೆ ಮಾಡಲು ಯಾವೊಬ್ಬ ವ್ಯಕ್ತಿಯೂ ಉದ್ದೇಶಿಸತಕ್ಕದ್ದಲ್ಲ.

ಭೂಸ್ವಾಧೀನದ ಪ್ರಕ್ರಿಯೆಗಳನ್ನು ಪ್ರಾರಂಭಿಸಿರುವ ಭೂಮಿಗಳ ಸಂಬಂಧದಲ್ಲಿ ಸಕ್ಷಮ ಪ್ರಾಧಿಕಾರಿಯ ಲಿಖಿತ ಪೂರ್ವಾನುಮೋದನೆಯೊಂದಿಗೆ ಹೊರತಾಗಿ, ಯಾವೊಬ್ಬ ವ್ಯಕ್ತಿಯೂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 1976ರ 19ನೇ ಪ್ರಕರಣ ಅಥವಾ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ, 1987ರ 19ನೇ ಪ್ರಕರಣದ ಅಡಿಯಲ್ಲಿ ಘೋಷಣೆಯನ್ನು ಪ್ರಕಟಿಸಲಾದ ಯೋಜನೆಯ ಸಂಬಂಧದಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಲಾದ ಯಾವುದೇ ನಗರ ಪ್ರದೇಶದಲ್ಲಿರುವ ಯಾವುದೇ ಭೂಮಿ ಅಥವಾ ಅದರ ಭಾಗವನ್ನು ಮಾರಾಟ, ಅಡಮಾನ, ದಾನ, ಗುತ್ತಿಗೆಯ ಮೂಲಕ ಅಥವಾ ಅನ್ಯಥಾ ವರ್ಗಾಯಿಸತಕ್ಕದ್ದಲ್ಲ ಅಥವಾ ವರ್ಗಾಯಿಸಲು ಉದ್ದೇಶಿಸತಕ್ಕದ್ದಲ್ಲ.

ಸಕ್ಷಮ ಪ್ರಾಧಿಕಾರವು ತಾನು ವಿಚಾರಣೆಯನ್ನು ನಡೆಸಿ ಅಂತಹ ಭೂಮಿಯನ್ನು ಮಾರಾಟ,ದಾನ,ಅಡಮಾನ, ಗುತ್ತಿಗೆ ಅಥವಾ ವರ್ಗಾವಣೆ ಮಾಡಲು ಅನುಮತಿಯನ್ನು, ಲಿಖಿತ ಆದೇಶದ ಮೂಲಕ ನೀಡಬಹುದು ಅಥವಾ ನೀಡಲು ನಿರಾಕರಿಸಬಹುದು.

ಸ್ವಾಧೀನಕ್ಕಾಗಿ ನೋಟಿಫಿಕೇಷನ್ ಹೊರಡಿಸಿರುವ ಭೂಮಿಯ ವರ್ಗಾವಣೆಯ ನೋಂದಣಿ ಮಾಡಲು ನೋಂದಣಾಧಿಕಾರಿಗೂ ನಿರ್ಬಂಧ ಹೇರಲಾಗಿದೆ. ಹಾಗಾಗಿ  ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಹೊರಡಿಸಿದ ಯಾವುದೇ ಭೂಮಿಯನ್ನು ಮಾರಾಟ, ಆಡಮಾನ, ದಾನ, ಗುತ್ತಿಗೆ ಅಥವಾ ಅನ್ಯಥಾ ವರ್ಗಾಯಿಸಲು ಯಾವೊಬ್ಬ ನೋಂದಣಾಧಿಕಾರಿಗೂ ಅಧಿಕಾರವಿಲ್ಲ.

ನೋಂದಣಿ ಅಧಿಕಾರಿಯ ಮುಂದೆ ಸಕ್ಷಮ ಪ್ರಾಧಿಕಾರಿಯ ಲಿಖಿತ ಅನುಮತಿಯನ್ನು ಹಾಜರುಪಡಿಸಿದ  ಹೊರತು ಅಂತಹ ಯಾವುದೇ ದಸ್ತಾವೇಜನ್ನು ಸಭ್ ರಿಜಿಸ್ಟ್ರಾರ್ ನೋಂದಾಯಿಸುವಂತಿಲ್ಲ.

ಸರಕಾರವು ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಯಾವುದೇ ವ್ಯಕ್ತಿಗಳು ಈ ನಿಯಮವನ್ನು ಉಲ್ಲಂಘಿಸಿ ಮಾರಾಟ,ಕ್ರಯ,ಅಡಮಾನ,ದಾನ,ಗುತ್ತಿಗೆ ಅಥವಾ ಯಾವುದೇ ರೂಪದಲ್ಲಿ ವರ್ಗಾಯಿಸಿದರೆ ಅಂತಹವರನ್ನು ಮೂರು ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದಾದ ಕಾರಾವಾಸ ಅಥವಾ ಜುಲ್ಮಾನೆ ಅಥವಾ ಇವೆರಡರಿಂದಲೂ ದಂಡಿಸಬಹುದಾಗಿದೆ.

ಹಾಗಾಗಿ ಕರ್ನಾಟಕ ಭೂ (ವರ್ಗಾವಣೆ ಮೇಲೆ ನಿರ್ಬಂಧ) ಅಧಿನಿಯಮವನ್ನು ಗಾಳಿಗೆ ತೂರಿ , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಮಾರಾಟ ಮಾಡಿದವರು, ಕೊಂಡವರು, ದಾನ ನೀಡಿದವರು,ದಾನ ಪಡೆದವರು ಹಾಗೂ ಈ ದಾಖಲೆಗಳನ್ನು ನೋಂದಾಯಿಸಿದ ಸಬ್ ರಿಜಿಸ್ಟ್ರಾರ್, ರೆವೆನ್ಯೂ ಅಧಿಕಾರಿ,ತಹಸೀಲ್ದಾರ್,ವಿಶೇಷ ಭೂಸ್ವಾಧೀನಾಧಿಕಾರಿ,ಮೂಡಾ ಆಯುಕ್ತ ಮತ್ತಿತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ರಾಜ್ಯ ಸರಕಾರ ಮುಂದಾಗಿ "ಕರ್ನಾಟಕ ಭೂ (ವರ್ಗಾವಣೆ ಮೇಲೆ ನಿರ್ಬಂಧ) ಅಧಿನಿಯಮ, 1991 ಮತ್ತು ಕಾನೂನಿನ ಘನತೆಯನ್ನು ಎತ್ತಿಹಿಡಿಯಲಿ.

 

-ಪಿ.ಜೆ.ರಾಘವೇಂದ್ರ ನ್ಯಾಯವಾದಿ ಮೈಸೂರು

key words: Sale of land, notification, has been issued, land acquisition, punishable offence.

SUMMARY:

If the government has issued a preliminary notification for acquisition of any land for any purpose, no person shall sell such land for which the notification has been issued, donation, purchase, lease, mortgage lease or alienation/transfer in any form is prohibited under the "Karnataka Land (Restriction on Transfer) Act, 1991".

Tags :
has been issuedland acquisition.notificationpunishable offenceSale of land
Next Article