HomeBreaking NewsLatest NewsPoliticsSportsCrimeCinema

ಗೆರಿಲ್ಲಾ ಹೋರಾಟಗಾರ ಸಂಗೊಳ್ಳಿರಾಯಣ್ಣ ಬ್ರಿಟೀಷರಿಗೆ ಸಿಂಹಸ್ವಪ್ನ ಆಗಿದ್ದ: ಸಿಎಂ ಸಿದ್ದರಾಮಯ್ಯ

04:36 PM Aug 26, 2024 IST | prashanth

ಬೆಳಗಾವಿ, ಆಗಸ್ಟ್, 26,2024 (www.justkannnada.in):  ಗೆರಿಲ್ಲಾ ಹೋರಾಟಗಾರ ಸಂಗೊಳ್ಳಿರಾಯಣ್ಣ ಬ್ರಿಟೀಷರಿಗೆ ಸಿಂಹಸ್ವಪ್ನ ಆಗಿದ್ದ. ಈಗ ಇನ್ನಷ್ಟು ಕಾಲ ಬದುಕಿದ್ದರೆ ಕಿತ್ತೂರಿನ ಮೇಲೆ ಬ್ರಿಟೀಷರ ಕಣ್ಣುಬೀಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಗೋಕಾಕದ ಕಳ್ಳಿಗುದ್ದಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ನಮ್ಮವರೇ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಟ್ಟರು. ಇಲ್ಲದೇ ಹೋಗಿದ್ದರೆ ಇನ್ನಷ್ಟು ಕಾಲ ಕ್ರಾಂತಿಕಾರಿ ಗೆರಿಲ್ಲಾ ಹೋರಾಟ ಮುಂದುವರೆದು ಬ್ರಿಟೀಷರಿಗೆ ನೀರು ಕುಡಿಸುತ್ತಿದ್ದ ಎಂದರು.

ರಾಯಣ್ಣನ ದೇಶಪ್ರೇಮ, ಜನಪ್ರೇಮವನ್ನು ಶಾಶ್ವತಗೊಳಿಸುವ ಉದ್ದೇಶದಿಂದ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ಆರಂಭಿಸಿದ್ದೇವೆ. ನೀವೆಲ್ಲಾ ಸಂಗೊಳ್ಳಿಗೆ ಭೇಟಿ ನೀಡಿ ಎಂದು ಕರೆ ನೀಡಿದರು.

ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ, ಮುಖ್ಯಸಚೇತಕ ಅಶೋಕ್ ಪಟ್ಟಣ್, ಕರ್ನಾಟಕ ಪ್ರದೇಶ  ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷರಾದ ಡಾ.ಸಣ್ಣಕ್ಕಿ ಅವರು ಉಪಸ್ಥಿತರಿದ್ದರು.

Key words: Sangollirayanna, lion, dream, British, CM Siddaramaiah

Tags :
BritishCM SiddaramaiahdreamlionSangollirayanna
Next Article