For the best experience, open
https://m.justkannada.in
on your mobile browser.

Mysuru Santro Ravi case: ವರ್ಷದ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ..!

06:08 PM May 09, 2024 IST | mahesh
mysuru santro ravi case  ವರ್ಷದ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು

ಮೈಸೂರು, ಮೇ.09,2024 :(www.justkannada.in news ) ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಗೆ ಇದೀಗ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಅತ್ಯಾಚಾರ, ಕೊಲೆ ಬೆದರಿಕೆ , ಅಟ್ರಾಸಿಟಿ ಮೊದಲದ ಪ್ರಕರಣಗಳು ಆರೋಪಿ ರವಿ ಅಲಿಯಾಸ್‌ ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿದ್ದವು. ಇದೀಗ ಪ್ರಕರಣ ದಾಖಲಾಗಿ ಒಂದು ವರ್ಷ ಎರಡು ತಿಂಗಳ ಬಳಿಕ ಆರೋಪಿಗೆ ಜಾಮೀನು ಮಂಜೂರಾಗಿದೆ.

ವಿವಿಧ ಪ್ರಕರಣಗಳಲ್ಲಿ ರಾಜ್ಯ ಸರಕಾರಕ್ಕೆ ತಲೆನೋವಾಗಿದ್ದ ಸ್ಯಾಂಟ್ರೋ ರವಿಯನ್ನು (Santro Ravi) ಕಳೆದ ವರ್ಷ ಗುಜರಾತ್‌ನಿಂದ ಬಂಧಿಸಿ ಕರೆತರಲಾಗಿತ್ತು. ಮೈಸೂರಿನ ಆರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಮೇ ೦೨ ರಂದು ಆರೋಪಿ ಸ್ಯಾಂಟ್ರೋ ರವಿಗೆ ಜಾಮೀನು ನೀಡಿದೆ.

ಈ ಮೊದಲು ಆರೋಪಿ ಜಾಮೀನಿಗೆ ಹೈಕೋರ್ಟ್‌ ಹಾಗೂ ಬಳಿಕ ಸುಪ್ರೀಂಕೋರ್ಟ್‌ ಗೆ ಅರ್ಜಿ ಸಲ್ಲಿಸಿ ಅಲ್ಲಿ ತಿರಸ್ಕೃತವಾಗಿತ್ತು. ಈಗ ಆರೋಗ್ಯ ಸಮಸ್ಯೆ ಕಾರಣ ಮತ್ತೆ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಪಡೆದುಕೊಂಡಿದ್ದಾನೆ.

ಏನಿದು ಪ್ರಕರಣ :

ಸ್ಯಾಂಟ್ರೋ ರವಿ ವಿರುದ್ಧ ಕಳೆದ ವರ್ಷ ಮೈಸೂರಿನಲ್ಲಿ ಪ್ರಕರಣ ದಾಖಲಾಗಿತ್ತು.  ವೇಶ್ಯಾವಾಟಿಕೆ, ಅಕ್ರಮ ವರ್ಗಾವಣೆ, ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಸ್ಯಾಂಟ್ರೋ ರವಿಯನ್ನು (Santro Ravi) ಕರ್ನಾಟಕ ಪೊಲೀಸರು ಗುಜರಾತ್​ನಲ್ಲಿ ಕಳೆದ ಜ.13 ರಂದು ಬಂಧಿಸಿ ಜ.14 ರಂದು ಕರ್ನಾಟಕಕ್ಕೆ ಕರೆತಂದಿದ್ದರು.

ರಾಯಚೂರು, ಮಂಡ್ಯ ಹಾಗೂ ಮೈಸೂರು ಪೊಲೀಸರು ಸಂಘಟಿತ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಗುಜರಾತ್​ನಲ್ಲಿ ಸ್ಯಾಂಟ್ರೋ ರವಿ ಇದ್ದುದನ್ನು ಪತ್ತೆ ಮಾಡಿದ್ದರು.

ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಂದೇ  ರಾತ್ರಿ 11.30ಕ್ಕೆ ‘ಆಕಾಶ್ ಏರ್’ ವಿಮಾನದಲ್ಲಿ ರವಿಯನ್ನು ಬೆಂಗಳೂರಿಗೆ ಕರೆತರಲಾಯಿತು. ನಂತರ ರಸ್ತೆ ಮಾರ್ಗದ ಮೂಲಕ ಮೈಸೂರಿಗೆ ಕರೆತರಲಾಗಿತ್ತು.

 ಸರಕಾರಕ್ಕೆ ಮುಜುಗರ ತಂದ ಪ್ರಕರಣ :

ಸ್ಯಾಂಟ್ರೋ ರವಿ (Santro Ravi) ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಂದಿನ ರಾಜ್ಯ ಸರಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಆರೋಪಿ ಬಂಧನ ವೇಳೆ ಆತನಿಂದ ವಶಪಡಿಸಿಕೊಂಡ ಮೊಬೈಲ್‌ ಹಾಗೂ ಇತರೆ ದಾಖಲೆಗಳು ಆರೋಪಿ ಜತೆಗೆ ಸರಕಾರದ ಮಂತ್ರಿಗಳು, ಶಾಸಕರು ಹಾಗೂ ಉನ್ನತ ಅಧಿಕಾರಿಗಳ ಸಂಪರ್ಕ ಇರುವುದು ಬಹಿರಂಗಗೊಂಡು ಮುಜುಗರ ಎದುರಿಸುವಂತಾಗಿತ್ತು.

ಆಗ, ಸ್ಯಾಂಟ್ರೋ ರವಿ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಆದೇಶಿಸಿದ್ದರು.

ವಂಚಕನ ವಿರುದ್ಧ ಹಲವಾರು ದೂರುಗಳ ದಾಖಲಾಗಿರುವ ಹಿನ್ನೆಲೆ ಉನ್ನತಮಟ್ಟದ ತನಿಖೆ ನಡೆಸುವಂತೆ ಸರಕಾರವು ಸಿಐಡಿಗೆ ಆದೇಶಿಸಿತ್ತು ಎಂದು ಸ್ಪಷ್ಟಪಡಿಸಿದ್ದರು.

ಬಳಿಕ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ಸಿಐಡಿ ವಶಕ್ಕೆ ನೀಡಿ ಕೋರ್ಟ್‌ ಆದೇಶಿಸಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಮೈಸೂರಿನ ಪೊಲೀಸರು ದಾಖಲೆಗಳನ್ನು ಸಿಐಡಿ ತಂಡಕ್ಕೆ ವಹಿಸಿದ್ದರು.

ಒಡನಾಡಿ ಪಾತ್ರ :

ಆರೋಪಿ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗುವುದರಿಂದ ಹಿಡಿದು ಆತನ ಬಂಧನದ ತನಕ ಮೈಸೂರಿನ ಸ್ವಯಂ ಸೇವಾ ಸಂಸ್ಥೆ ಒಡನಾಡಿ ಪಾತ್ರ ಪ್ರಮುಖವಾಗಿತ್ತು. ಒಡನಾಡಿದ ಸ್ಟ್ಯಾನ್ಲಿ ಹಾಗೂ ಪರಶು ರಾಮ್ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

key words :  KS Manjunath,  alias Santro Ravi , has been,  granted bail,  by the court.

summary: 

Ravi alias Santro Ravi was booked in the first cases of rape, death threats and atrocity. The accused has been granted bail one year and two months after the case was registered.

Santro Ravi, who has been a headache for the state government in various cases, was arrested from Gujarat last year. The sixth additional district court in Mysuru granted bail to accused Santro Ravi on May 02.

 

 

 

Tags :

.