For the best experience, open
https://m.justkannada.in
on your mobile browser.

ಹಿರಿಯ ಪತ್ರಕರ್ತ ಮುರುಳಿ ನಿಧನ: KUWJ ಸಂತಾಪ

10:59 AM Jun 11, 2024 IST | prashanth
ಹಿರಿಯ ಪತ್ರಕರ್ತ ಮುರುಳಿ ನಿಧನ  kuwj ಸಂತಾಪ

ಹಾಸನ,ಜೂನ್,11,2024 (www.justkannada.in): ಹಾಸನವಾಣಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ  ಮುರಳಿ(55) ಅವರು ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹಿರಿಯ ಪತ್ರಕರ್ತೆ ಲೀಲಾವತಿ ಅವರ ಪುತ್ರನಾಗಿದ್ದ ಮುರುಳಿ, ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಯಾಗಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಸ್ನೇಹಜೀವಿ ಮುರುಳಿ,  ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನ ಮತ್ತು ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಮುರುಳಿ ಅವರ ಅಂತ್ಯಕ್ರಿಯೆ ಹಾಸನದ ಬಿಟ್ಟಗೋಡನಹಳ್ಳಿ ರುದ್ರಭೂಮಿಯಲ್ಲಿ ನಡೆಯಲಿದೆ.

ಕೆಯುಡಬ್ಲೂಜೆ ಸಂತಾಪ:

ಹಿರಿಯ ಪತ್ರಕರ್ತ ಮುರುಳಿ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಸ್ನೇಹ ಜೀವಿಯಾಗಿದ್ದ ಪತ್ರಕರ್ತ ಮುರುಳಿ ಸಂಘಟಕನಾಗಿಯೂ ಗಮನ ಸೆಳೆದಿದ್ದರು. ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲಾರದ ಸಂಗತಿ ಎಂದು ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿಸಿದ್ದಾರೆ. ಮುರುಳಿ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Key words: Senior journalist, Muruli, passes away

Tags :

.