ಹೆಚ್.ಡಿ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ: ಮೇ 20ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್.
05:20 PM May 17, 2024 IST
|
prashanth
ಬೆಂಗಳೂರು,ಮೇ,17,2024 (www.justkannada.in): ಶಾಸಕ ಹೆಚ್.ಡಿ ರೇವಣ್ಣ ವಿರುದ್ದದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 42ನೇ ಎಸಿಎಂಎಂ ಕೋರ್ಟ್ ಮೇ 20ಕ್ಕೆ ಜಾಮೀನು ಅರ್ಜಿ ಸ್ವೀಕಾರಾರ್ಹತೆ ಬಗ್ಗೆ ಆದೇಶವನ್ನ ಕಾಯ್ದಿರಿಸಿದೆ.
ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಇಂದು 42ನೇ ಎಸಿಎಂಎಂ ಕೊರ್ಟ್ ನಲ್ಲಿ ನಡೆಯಿತು. ಹೆಚ್.ಡಿ ರೇವಣ್ಣ ಪರ ವಕೀಲ ಬಿವಿ ನಾಗೇಶ್ ವಾದ ಮಂಡಿಸಿದರು.
ವಾದ ಆಲಿಸಿದ 42ನೇ ಎಸಿಎಂಎಂ ಕೋರ್ಟ್, ಜಾಮೀನು ಅರ್ಜಿ ಸ್ವೀಕಾರಾರ್ಹತೆ ಬಗ್ಗೆ ಮೇ 20ಕ್ಕೆ ಆದೇಶ ಕಾಯ್ದಿರಿಸಿದೆ. ಇನ್ನು ಹೆಚ್ ಡಿ ರೇವಣ್ಣ ಅವರಿಗೆ ಮೇ 20ರವರೆಗೆ ಮಂಧ್ಯಂತರ ಜಾಮೀನು ಮುಂದುವರೆಯಲಿದೆ.
Key words: Sexual assault -case - HD Revanna- Court- reserved
Next Article