HomeBreaking NewsLatest NewsPoliticsSportsCrimeCinema

ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ಕೋರ್ಟ್ ಗೆ ಹಾಜರು.

02:01 PM May 31, 2024 IST | prashanth

ಬೆಂಗಳೂರು,ಮೇ,31,2024 (www.justkannada.in):  ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನ ಕೋರ್ಟ್ ಗೆ ಹಾಜರುಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

42ನೇ ಎಸಿಎಂಎಂ ಕೋರ್ಟ್ ಗೆ ಪ್ರಜ್ವಲ್ ರೇವಣ್ಣರನ್ನ ಎಸ್ ಐಟಿ ಅಧಿಕಾರಿಗಳು ಕರೆತಂದಿದ್ದು,  ವಿಚರಣೆ ಬಳಿ ಪ್ರಜ್ವಲ್ ರೇವಣ್ಣರನ್ನ ತಮ್ಮ ವಶಕ್ಕೆ ಕೇಳಲಿದ್ದಾರೆ ಕೆಲವೇ ಕ್ಷಣಗಳಲ್ಲಿ ವಿಚಾರಣೆ ಆರಂಭವಾಗಲಿದೆ.

ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಒಂದು ತಿಂಗಳ ನಂತರ ವಿದೇಶದಿಂದ ಆಗಮಿಸಿದ, ಆರೋಪಿ ಸಂಸದ ಪ್ರಜ್ವಲ್ ರೇವಣ್ಣರನ್ನ ತಡರಾತ್ರಿ  ಎಸ್‌ಐಟಿ ಬಂಧಿಸಿತು.  ನಂತರ ಇಂದು ಪ್ರಜ್ವಲ್ ರೇವಣ್ಣರನ್ನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಪಡಿಸಿದ ಎಸ್ ಐ ಟಿ ಈ ಪ್ರಕ್ರಿಯೆ ನಡೆಸಿದ ಬಳಿಕ ಸಿವಿಲ್ ಕೋರ್ಟ್ ಗೆ ಹಾಜರುಪಡಿಸಿದೆ. ವಾದ ವಿವಾದ ಆಲಿಸುವ ಕೋರ್ಟ್ ಯಾವ ತೀರ್ಪು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Key words: Sexual, assault, case, Prajwal Revanna, court

Tags :
Sexual-assault-case-Prajwal Revanna - court.
Next Article