For the best experience, open
https://m.justkannada.in
on your mobile browser.

ಎರಡು ವರ್ಷಗಳಿಂದ ತನ್ನೊಂದಿಗೆ ಸಂಸಾರ ನಡೆಸಿಲ್ಲ ಎಂದು ಪೊಲೀಸ್ ಠಾಣೆ ಎದುರು ಪಿಎಸ್‌ಐ ಪತ್ನಿ ಪ್ರತಿಭಟನೆ

05:43 PM May 22, 2024 IST | mahesh
ಎರಡು ವರ್ಷಗಳಿಂದ ತನ್ನೊಂದಿಗೆ ಸಂಸಾರ ನಡೆಸಿಲ್ಲ ಎಂದು ಪೊಲೀಸ್ ಠಾಣೆ ಎದುರು ಪಿಎಸ್‌ಐ ಪತ್ನಿ ಪ್ರತಿಭಟನೆ

ಸಿದ್ದಿಪೇಟೆ, ಮೇ,22,2024: (www.justkannada.in news) ಜಿಲ್ಲೆಯ ಕೊಮುರವಳ್ಳಿ ಪೊಲೀಸ್ ಠಾಣೆ ಎದುರು ಪಿಎಸ್‌ಐ ಪತ್ನಿ ಪ್ರತಿಭಟನೆ ಈಗ ಗಮನ ಸೆಳೆದಿದೆ.

ಕೊಮುರವಳ್ಳಿ ಎಸ್‌ಐ ನಾಗರಾಜು ಎರಡು ವರ್ಷಗಳಿಂದ ತನ್ನೊಂದಿಗೆ ಸಂಸಾರ ನಡೆಸಿಲ್ಲ ಎಂಬುದು ಪತ್ನಿ ಆರೋಪ. ಮುಂದುವರಿದು, ಗಂಡ ಬೇರೆ ಮದುವೆಯಾಗಿ ತನಗೆ ಮೋಸ ಮಾಡಿದ್ದಾನೆ ಎಂದು ದೂರಿದ್ದಾರೆ.

ಸಂತ್ರಸ್ತರಿಗೆ ನ್ಯಾಯ ಒದಗಿಸುವ ಜವಾಬ್ದಾರಿಯುತ ಕೆಲಸದಲ್ಲಿರುವ ಪಿಎಸ್ ಐ ತನ್ನ ಪತ್ನಿಗೆ ಅನ್ಯಾಯ ಮಾಡಿದ್ದಾನೆ. ಆಕೆಗೆ ತಿಳಿಯದಂತೆ ಎರಡನೇ ಮದುವೆಯಾಗಿ ಕಳೆದ ಎರಡು ವರ್ಷಗಳಿಂದ ಮಡದಿಗೆ ನರಕಯಾತನೆ ನೀಡುತ್ತಿದ್ದಾನೆ. ಇದರಿಂದ ಬೇಸತ್ತ ಪತ್ನಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಸಂತ್ರಸ್ತೆಯ ಸಂಬಂಧಿಕರ ಪ್ರಕಾರ, ಮಾನಸ ಅವರು ಸಿದ್ದಿಪೇಟೆ ಜಿಲ್ಲೆಯ ಕೊಮುರವಳ್ಳಿ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿ ಕೆಲಸ ಮಾಡುತ್ತಿದ್ದ ನಾಗರಾಜು ಅವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಕರೀಂನಗರದ ಬಾಡಿಗೆ ಮನೆಯಲ್ಲಿ ಪತ್ನಿ ಮಾನಸ ಹಾಗೂ ಇಬ್ಬರು ಮಕ್ಕಳನ್ನು ಇರಿಸಿದ್ದರು. ಆ ನಂತರ ಆಗಾಗ ಕರೀಂನಗರಕ್ಕೆ ಬರುತ್ತಿದ್ದ ನಾಗರಾಜು ಕೊಮುರವಳ್ಳಿಯಲ್ಲಿ ತಂಗಿದ್ದರು. ಕಳೆದ ಎರಡು ತಿಂಗಳಿಂದ ನಾಗರಾಜು ಪತ್ನಿ ಮಾನಸಾಗೆ ಚಿತ್ರಹಿಂಸೆ ನೀಡುತ್ತಿದ್ದು, ಅವರೇ ವಿಚ್ಛೇದನ ನೀಡುವಂತೆ ಬಲವಂತ ಪಡಿಸುತ್ತಿದ್ದಾರೆ.

ನಾಗರಾಜು,  ವರ್ಷದ ಹಿಂದೆ ಬೇರೊಬ್ಬ ಹುಡುಗಿಯನ್ನು ಮದುವೆಯಾಗಿದ್ದ ಎಂದು ಸಂತ್ರಸ್ತೆ ಮಾನಸಾ ಹೇಳಿದ್ದು, ಅದಕ್ಕಾಗಿಯೇ ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಕುಟುಂಬ ಸದಸ್ಯರು ಸಹ ಇದರಲ್ಲಿ ಶಾಮೀಲಾಗಿದ್ದಾರೆ ಎಂದಿರುವ ಮಾನಸ,  ನ್ಯಾಯ ಕೇಳಲು ಕೊಮುರವಳ್ಳಿ ಠಾಣೆಗೆ ಹೋದಾಗ ಸಿಬ್ಬಂದಿ ಎಸ್‌ಐ ರಜೆಯಲ್ಲಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರೂ ನ್ಯಾಯ ಸಿಗುತ್ತಿಲ್ಲ ಎಂದು ಅಲವತ್ತುಕೊಂಡರು.

key words:  Komuravelli , SI Wife, Protest Against, Her Husband, Infront of Police Station

summary: 

The wife alleged that Komuravalli SI Nagaraju had not lived with her for two years. She further alleged that her husband had cheated on her by marrying someone else.

Manasa said that the family members were also involved in the incident and when they went to Komuravalli police station to seek justice, the staff SI was on leave. He complained that he had appealed to the district police officials but was not getting justice.

Tags :

.