HomeBreaking NewsLatest NewsPoliticsSportsCrimeCinema

ಮದುವೆಗೂ ಮುಂಚೆ ಜಾತಕ ಹೊಂದಾಣಿಕೆಗಿಂತ ʼ ಸಿಕಲ್ ಸೆಲ್ ಕಾರ್ಡ್‌ ʼ  ಹೊಂದಾಣಿಕೆಯೇ ಮುಖ್ಯ..!

06:06 PM Jun 19, 2024 IST | mahesh

 

All tribals in the Karnataka State below 40 years will be given identity cards on their sickle cell anemia status. The colour-coded cards can be matched ahead of a marriage in order to assess the risk of sickle cell disease in a child born from the union.

ಮೈಸೂರು, ಜೂ.19,2024: (www.justkannada.in news) ರೋಗ ನಿಯಂತ್ರಣಕ್ಕಿಂತ ರೋಗ ತಡೆಗಟ್ಟುವಿಕೆಯೇ ಮುಖ್ಯವಾದದ್ದು ಎಂಬುದನ್ನು ಮನಗಂಡಿರುವ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ, ಈ ನಿಟ್ಟಿನಲ್ಲಿ ಸಿಕಲ್‌ ಸೆಲ್‌ ಅನೀಮಿಯಾ ತಡೆಗೆ  ʼ ಸಿಕಲ್‌ ಸೆಲ್‌ ಅನೀಮಿಯಾ ಕಾರ್ಡ್‌ ʼ (Sickle-cell anemia cards) ವಿತರಣೆಗೆ ಮುಂದಾಗಿದೆ.

ಇದರಿಂದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವುಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ. ಈ ಕಾರ್ಡ್ ಮಾರ್ಗದರ್ಶಕವಾಗಿ, ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉಚಿತ ಚಿಕಿತ್ಸಾ ಸೇವೆಗಳು, ಔಷಧ ಪೂರೈಕೆ, ನಿಯಮಿತ ತಪಾಸಣೆಗಳು ಮತ್ತು ಸಮುದಾಯಮಟ್ಟದಲ್ಲಿ ಶಿಕ್ಷಣ ಕಾರ್ಯಗಳು ನೀಡಲಾಗುತ್ತದೆ. ಈ ಬಗ್ಗೆ ಆರೋಗ್ಯ ಮತ್ತು ಕುಂಟುoಬ ಕಲ್ಯಾಣ ಸೇವೆಗಳ ಅಭಿಯಾನದ ನಿರ್ದೇಶಕ ಡಾ. ನವೀನ್ ಭಟ್  ʼ ಜಸ್ಟ್‌ ಕನ್ನಡ ʼ ಜತೆ ಮಾತನಾಡಿದರು.

ಸಿಕ್ಕಿಲ್ ಸೆಲ್ ಅನೀಮಿಯಾದವರು ತಕ್ಷಣ ಚಿಕಿತ್ಸೆ ಪಡೆಯಲು ಈ ಕಾರ್ಡ್ ಸಹಾಯ ಮಾಡುತ್ತದೆ. ಈ ಕಾರ್ಡ್ ಮೂಲಕ ರೋಗಿಗಳ ವಿವರಗಳನ್ನು ಸರಕಾರ ಇತ್ಯರ್ಥವಾಗಿ ಶ್ರೇಣೀಕರಿಸಲು ಸಾಧ್ಯ, ಇದು ಉತ್ತಮ ಯೋಜನೆ ಮತ್ತು ಕಾರ್ಯೋನ್ಮುಖತೆಗೆ ಸಹಕಾರಿಯಾಗುತ್ತದೆ.

ಸಮುದಾಯ ಜಾಗೃತಿ:

ಸಾಮಾನ್ಯ ಜನರಲ್ಲಿ ಸಿಕ್ಕಿಲ್ ಸೆಲ್ ಅನೀಮಿಯಾ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಹಾಯಕ.  ಈ ರೋಗ ಲಕ್ಷಣಗಳು ಸಾಮಾನ್ಯವಾಗಿ ಬುಡಕಟ್ಟು ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ರಾಜ್ಯದಲ್ಲಿನ ಬುಡಗಟ್ಟು ಜನಾಂಗದವರಿಗೆ ಈ ಕಾರ್ಡ್‌ ಗಳನ್ನು ವಿತರಿಸಲಾಗುತ್ತಿದೆ. ಈ ತನಕ ಒಂದು ಸಾವಿರಕ್ಕೂ ಅಧಿಕ ಕಾರ್ಡ್‌ ಗಳನ್ನು ವಿತರಿಸಲಾಗಿದೆ.

ಬುಡಕಟ್ಟು ಜನಾಂಗದ ಬಹುತೇಕರು  ಅವಿದ್ಯಾವಂತರು.  ರಕ್ತ ಸಂಬಂಧದಲ್ಲೇ ಮದುವೆಗಳು ಹೆಚ್ಚಾಗಿ ನಡೆಯುವ ಕಾರಣ, ಈ ರೋಗ ಲಕ್ಷಣ ವಂಶಪರಾಂಪರ್ಯವಾಗಿ ಹರಡುತ್ತಲೇ ಇದೆ. ಆದ್ದರಿಂದ ಸಿಕಲ್‌ ಸೆಲ್‌ ಕಾರ್ಡ್‌ ಗಳನ್ನು ನೀಡುವ ಮೂಲಕ ಮದುವೆ ಸಂದರ್ಭದಲ್ಲಿ  ಅವರೇ ಖುದ್ದು ಪರಿಶೀಲಿಸಿಕೊಳ್ಳಬಹುದು. ಮದುವೆಯಾಗುವ ಹುಡುಗ ಹಾಗೂ ಹುಡುಗಿಯ ಕಾರ್ಡ್‌ ಗಳನ್ನು ಒವರ್‌ ಲ್ಯಾಪ್‌ ಮಾಡುವ ಮೂಲಕ “ ಕಲರ್‌ ಕೋಡಿಂಗ್‌ “ ನ ಫಲಿತಾಂಶದ ಮೇಲೆ ಮದುವೆಯಾದ್ರೆ ಸಿಕಿಲ್‌ ಸೆಲ್‌ ಅನಿಮೀಯಾ ಬರುವ ಸಾಧ್ಯತೆಯ ಪ್ರಮಾಣ ಎಷ್ಟು ಎಂಬುದನ್ನು ತಿಳಿದುಕೊಂಡು ಆನಂತರ ಮದುವೆ ಮಾಡಬೇಕೆ..? ಅಥವಾ ಬೇಡವೇ..? ಎಂಬುದನ್ನು ನಿರ್ಧರಿಸಬಹುದು .

ಸರಕಾರಿ ಯೋಜನೆಗಳ ಲಾಭಗಳನ್ನು ಪಡಿಸಿಕೊಳ್ಳಲು ಈ ಕಾರ್ಡ್ ಅತೀ ಮುಖ್ಯವಾಗುತ್ತದೆ. ಇದರ ಮೂಲಕ ಸಿಕ್ಕಿಲ್ ಸೆಲ್ ಅನೀಮಿಯಾ ಪೀಡಿತರ ಆರೋಗ್ಯದ ಸ್ಥಿತಿ ಸುಧಾರಿಸುತ್ತಿದ್ದು, ಉತ್ತಮ ಗುಣಮಟ್ಟದ ಬದುಕಿಗೆ ಸಹಾಯವಾಗುತ್ತದೆ.

ಲಾಸ್ಟ್‌ ಪಂಚ್‌ ಲೈನ್‌ :

ಇದೊಂದು ಅನುವಂಶಿಕ ಕಾಯಿಲೆ. ಈ ರೋಗವು ಆದಿವಾಸಿಗಳಲ್ಲಿ ಸಾಮಾನ್ಯವಾಗಿದೆ. ದೇಶದಲ್ಲಿ ಸುಮಾರು 200 ಜಿಲ್ಲೆಗಳಲ್ಲಿ ರೋಗ ಹರಡಿದೆ - ಹೆಚ್ಚಾಗಿ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಕಂಡು ಬಂದಿದೆ.

"2047 ರ ವೇಳೆಗೆ ಈ ರೋಗವನ್ನು ತೊಡೆದುಹಾಕುವ ಗುರಿ ಹೊಂದಲಾಗಿದೆ. ಇದು ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬಂದಿದೆ. ವಂಶಪರಾಂಪರ್ಯವಾಗಿ  ಹರಡುವುದರಿಂದ, ನಿರಂತರ ತಪಾಸಣೆ ಪ್ರಯತ್ನದ ಮೂಲಕ ತಡೆಗಟ್ಟುವಿಕೆ ಸಾಧ್ಯವಾಗುತ್ತದೆ.

40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಬುಡಕಟ್ಟು ಜನಾಂಗದವರಿಗೆ ಕಲರ್‌ -ಕೋಡೆಡ್ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಮದುವೆ ಮಾತುಕತೆ ವೇಳೆ ಎರಡು ಕಾರ್ಡ್‌ಗಳನ್ನು ಹೊಂದಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು.

key words: 'Sickle cell card' compatibility, is more important, than horoscope matching, before marriage.

 

SUMMARY:

All tribals in the Karnataka State below 40 years will be given identity cards on their sickle cell anemia status. The colour-coded cards can be matched ahead of a marriage in order to assess the risk of sickle cell disease in a child born from the union.

Sickle cell anaemia is an inherited disease where a person has misshapen haemoglobin that has less ability to carry oxygen. The disease is common among tribals.

“The target is to eliminate the disease by 2047. It is a disease that happens only in tribal areas and since it is genetically transmitted, the screening effort will be on prevention. We will give colour-coded identity cards to all tribals aged less than 40 years. When marriage negotiations happen, the two cards can be matched.

 

Tags :
'Sickle cell card' compatibilitybefore marriage.is more importantthan horoscope matching
Next Article