ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರವಿಲ್ಲ: ಜೈಲಿಗೆ ಕಳುಹಿಸಲು ಷಡ್ಯಂತ್ರ- ದಿನೇಶ್ ಗುಂಡೂರಾವ್
ಬೆಳಗಾವಿ,ಆಗಸ್ಟ್,3,2024 (www.justkannada.in): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರವಿಲ್ಲ. ಆದರೂ ಸಿದ್ದರಾಮಯ್ಯರನ್ನ ಜೈಲಿಗೆ ಕಳುಹಿಸಲು ಬಿಜೆಪಿ, ಜೆಡಿಎಸ್ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಪಾದಯಾತ್ರೆ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಪಾದಯಾತ್ರೆ ಮಾಡಲು ವಿಜಯೇಂದ್ರಗೆ ಯಾವ ನೈತಿಕತೆ ಇಲ್ಲ ಬಿಜೆಪಿಯವರು ರಾಜಭವನ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರು 100 ಪುಟದ ದೂರು ಓದದೆ ರಾ ನೋಟಿಸ್ ಕೊಟ್ಟಿದ್ದಾರೆ. ಅರವಿಂದ ಕೇಜ್ರಿವಾಲ್, ಡಿಕೆ ಶಿವಕುಮಾರ್, ಪಿ. ಚಿದಂಬರಂ ಅವರನ್ನ ಜೈಲಿಗೆ ಹಾಕಿದ್ರು. ಈಗ ಸಿದ್ದರಾಮಯ್ಯರನ್ನ ಜೈಲಿಗೆ ಹಾಕಲು ಯತ್ನಿಸುತ್ತಿದ್ದಾರೆ ರಾಹುಲ್ ಗಾಂಧಿಗೂ ಶಿಕ್ಷೆ ಕೊಡಿಸುವ ಕೆಲಸ ಮಾಡಿದ್ರು ಎಂದು ಕಿಡಿಕಾರಿದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಸಿದ್ದರಾಮಯ್ಯ ಸರ್ಕಾರ ಬೀಳಿಸಲು ಷಡ್ಯಂತ್ರ ಮಾಡುತ್ತಿದ್ದಾರೆ ಸಿಎಂ ತಪ್ಪು ಮಾಡಿಲ್ಲವೆಂದು ಜೆಡಿಎಸ್ ಬಿಜೆಪಿಯವರಿಗೂ ಗೊತ್ತಿದೆ. ಮಂಡ್ಯ ರಾಮನಗರ ಮೈಸೂರಿನಲ್ಲಿ ಜೆಡಿಎಸ ಪ್ರಾಬಲ್ಯವಿದೆ. ಹೀಗಾಗಿ ಬಿಜೆಪಿ ತಮ್ಮ ನೆಲೆ ಗಟ್ಟಿ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಮುಷ್ಠಿಯಲ್ಲಿ ಸಿಲುಕಿದ್ದಾರೆ ಎಂದು ಲೇವಡಿ ಮಾಡಿದರು.
ಸಿಎಂ ಸಿದ್ದರಾಮಯ್ಯರನ್ನ ಮುಗಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಮೋದಿ ಸರ್ಕಾರದ ವಿರುದ್ದ ಸಿದ್ದರಾಮಯ್ಯ ದೊಡ್ಡ ಧನಿಯಾಗಿದ್ದರು. ಸಿಎಂ ಸಿದ್ದರಾಮಯ್ಯ ಅವರ ಹೋರಾಟದಿಂದ ಕೇಂದ್ರಕ್ಕೆ ಮುಜುಗರ ತಂದಿದೆ. ಹೀಗಾಗಿ ವಾಲ್ಮೀಕಿ ನಿಗಮ ಕೇಸ್ ನಲ್ಲೂ ಸಿಎಂ ಸಿದ್ದರಾಮಯ್ಯರನ್ನ ಸಿಲುಕಿಸಲು ಯತ್ನಿಸಿದರು. ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಸಿದ್ದರಾಮಯ್ಯಗೆ ನ್ಯಾಯಯುತವಾಗಿ ಸಿಗಬೇಕಿದ್ದ ಸೈಟ್ ಸಿಕ್ಕಿದೆ. ಸೈಟ್ ಕೊಟ್ಟಿದ್ದು ಬಿಜೆಪಿಯವರೇ. ನಾವು ಅಕ್ರಮ ಗಣಿಗಾರಿಕೆ ವಿರುದ್ದ ಪಾದಯಾತ್ರೆ ಮಾಡಿದ್ದವು ಮೇಕೆದಾಟು ಪಾದಯಾತ್ರೆ ಮಾಡಿದ್ದವು ಎಂದರು.
Key words: Siddaramaiah, no role, Muda scam, Dinesh Gundurao