For the best experience, open
https://m.justkannada.in
on your mobile browser.

ಕೇಜ್ರಿವಾಲ್ ಕೇಸ್ ಉದಾಹರಣೆ ನೀಡಿದ್ಧೇನಷ್ಟೆ: ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಎಂದಿಲ್ಲ- ಶಾಸಕ ಶ್ರೀವತ್ಸ

06:35 PM Aug 14, 2024 IST | prashanth
ಕೇಜ್ರಿವಾಲ್ ಕೇಸ್ ಉದಾಹರಣೆ ನೀಡಿದ್ಧೇನಷ್ಟೆ  ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಎಂದಿಲ್ಲ  ಶಾಸಕ ಶ್ರೀವತ್ಸ

ಮೈಸೂರು,ಆಗಸ್ಟ್,14,2024 (www.justkannada.in):  ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಎಂದು ಹೇಳಿಲ್ಲ. ಅರವಿಂದ್ ಕ್ರೇಜಿವಾಲ್ ಪ್ರಕರಣ ಉದಾಹರಣೆ ನೀಡಿದ್ದೇನೆ ಅಷ್ಟೆ ಎಂದು ಶಾಸಕ ಶ್ರೀವತ್ಸ ಸ್ಪಷ್ಟನೆ ನೀಡಿದರು.

ಈ ಕುರಿತು ಇಂದು ಮಾತನಾಡಿದ ಶಾಸಕ ಶ್ರೀವತ್ಸ, ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಪಡೆದಿರೋ ನಿವೇಶನ ಅಕ್ರಮವಾಗಿದೆ. ಸ್ವತಃ ಜಿಲ್ಲಾಧಿಕಾರಿಗಳಿಗೆ ಇದು ಕಾನೂನುಬಾಹಿರ ಎಂದು ಹೇಳಿದ್ದಾರೆ. ಈಗಿರುವಾಗ ಸಿಎಂ ಯಾಕೆ ನಿವೇಶನ ವಾಪಸ್ ಕೊಡಲಿಕ್ಕೆ ಮುಂದಾಗಲಿಲ್ಲ. 2 ನಿವೇಶನ ಪಡೆಯಬೇಕಾದ ಸಿದ್ದರಾಮಯ್ಯ 14 ನಿವೇಶನ ಪಡೆದಿದ್ದು ಯಾಕೆ? ಅಧಿಕಾರಿಗಳ ವರ್ಗಾವಣೆ ಮಾಡೋದು ಮಾತ್ರವಲ್ಲ. ಅಧಿಕಾರಿಗಳ ತಪ್ಪಿದ್ದರೆ ಶಿಕ್ಷೆ ಆಗಬೇಕು ಎಂದರು.

ಸಿದ್ದರಾಮಯ್ಯರ ಪತ್ನಿ ಪಡೆದಿರೋ ನಿವೇಶನದಲ್ಲಿ ಅಕ್ರಮ ಆಗಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಿದ್ದರಾಮಯ್ಯರ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಬೇಕಿತ್ತು. ಸೋಮಶೇಖರ್ ರವರು ನನ್ನ ಹೇಳಿಕೆಯನ್ನ ಯಾವ ರೀತಿ ಅರ್ಥೈಸಿಕೊಂಡಿದ್ದರೋ ಗೊತ್ತಿಲ್ಲ ಎಂದರು.

ಟ್ರಾಫಿಕ್ ಪೊಲೀಸ್ ಆದ ಬಿಜೆಪಿ ಶಾಸಕ ಶ್ರೀವತ್ಸ

ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಕೆಲ ಕಾಲ ಟ್ರಾಫಿಕ್ ಪೊಲೀಸ್ ಆಗಿ ರಸ್ತೆಗಿಳಿದು ಪಿಲ್ಡ್ ಕ್ಲಿಯರ್ ಮಾಡಿದ ಘಟನೆ ನಡೆಯಿತು.

ನಗರದ ರಾಮಾನುಜ ರಸ್ತೆಯಲ್ಲಿ ಶಾಸಕ ಶ್ರೀವತ್ಸ ಹೋಗುತ್ತಿದ್ದ ವೇಳೆ ಟ್ರಾಫಿಕ್ ಜಾಮ್ ಉಂಟಾಗಿದ್ದುಈ ಹಿನ್ನೆಲೆಯಲ್ಲಿ ಅಲ್ಲೇ ನಿಂತು  ವಾಹನ ಸವಾರರಿಗೆ ದಾರಿ ಮಾಡಿಕೊಟ್ಟರು. ಟ್ರಾಫಿಕ್ ಜಾಮ್ ಹಿನ್ನಲೆ ರಸ್ತೆಗಿಳಿದು ಪಿಲ್ಡ್ ಕ್ಲಿಯರ್  ಮಾಡಿದರು.  ಇದೇ ವೇಳೆ ಆಂಬುಲೆನ್ಸ್ ಬಂದಿದ್ದು,  ಆಂಬುಲೆನ್ಸ್ ಗೆ ಅಡ್ಡ ಬರದಂತೆ ಶಾಸಕರು ದಾರಿ ಮಾಡಿಕೊಟ್ಟರು.  ಶಾಸಕರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

Key words: Siddaramaiah, not, jail , MLA, Srivatsa

Tags :

.