HomeBreaking NewsLatest NewsPoliticsSportsCrimeCinema

ಸಿದ್ದರಾಮಯ್ಯ ನಮ್ಮ ನಾಯಕರು, ಅವರೇ ನಮ್ಮ ಸಿಎಂ- ಸಂಸದ ಡಿ.ಕೆ ಸುರೇಶ್.

11:27 AM Nov 03, 2023 IST | prashanth

ಬೆಂಗಳೂರು,ನವೆಂಬರ್,3,2023(www.justkannada.in): ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿಕೆ ಕುರಿತು ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಸಿದ್ಧರಾಮಯ್ಯ ನಮ್ಮ ನಾಯಕರು, ಅವರೇ ನಮ್ಮ ಸಿಎಂ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಡಿ.ಕೆ ಸುರೇಶ್, ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಖಾಲಿ ಇದ್ದಾಗ ಚರ್ಚಿಸಿದರೇ ಅರ್ಥ ಆಗುತ್ತೆ ಮುಂದಿನ ಸಿಎಂ ಬಗ್ಗೆ ಕೆಲವರ ಅಭಿಪ್ರಾಯವಿದೆ.  5 ವರ್ಷ ಆಡಳಿತ ನಡೆಸಲು ಜನ ಕಾಂಗ್ರೆಸ್ ಗೆ ಅವಕಾಶ ನೀಡಿದ್ದಾರೆ. ಈಗ ನಮ್ಮ ನಾಯಕರು ಸಿದ್ದರಾಮಯ್ಯ. ಅವರೇ ನಮ್ಮ  ಸಿಎಂ ಸಂದೇಹ ಬೇಡ ಎಂದರು.

ಸರ್ಕಾರ ಸುಭದ್ರವಾಗಿ ಇರಬೇಕು ಎಂಬುದು ಇಬ್ಬರ ಗುರಿ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಕುರ್ಚಿ ಖಾಲಿ ಇದ್ದಾಗ ಅಭಿಪ್ರಾಯಗಳಿಗೆ ಮನ್ನಣೆ ಸಿಗುತ್ತದೆ  ಸಿಎಂ ಹುದ್ದೆ ಖಾಲಿ ಇದ್ದರೆ ಮಾತ್ರ ಮಾತನಾಡಿ ಎಂದರು.

Key words: Siddaramaiah - our leader- our CM-MP -DK Suresh.

Tags :
Siddaramaiah - our leader- our CM-MP -DK Suresh.
Next Article