HomeBreaking NewsLatest NewsPoliticsSportsCrimeCinema

ಸಿಎಂ ಸಿದ್ದರಾಮಯ್ಯ ನಿಮಗೆ ಫೋನ್‌ ಮಾಡಿದ್ರ..?

12:06 PM Apr 11, 2024 IST | mahesh

 

ಮೈಸೂರು, ಏ. 11, 2024  : (www.justkannada.in news )  ಪ್ರಸ್ತುತ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ೨೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಪಣತೊಟ್ಟಿದ್ದು, ಇದಕ್ಕಾಗಿ ಶಾಸಕರು ಹಾಗೂ ಮಾಜಿ ಶಾಸಕರನ್ನು ಮತಯಾಚನೆಯ ಕಣಕ್ಕಿಳಿಸಿ ಮತ ಬೇಟೆಗೆ ಮುಂದಾಗಿದ್ದಾರೆ.

ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಟೆಲಿ ಕಾಲರ್‌ ಮೂಲಕವೂ ಮತಯಾಚನೆ ಶುರು ಮಾಡಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ ಪರ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದಾರೆ.

ಪೂರ್ವ ಮುದ್ರಿತ ಧ್ವನಿ ಸಂದೇಶವನ್ನು ಒಳಗೊಂಡ ಟೆಲಿಕಾಲರ್‌ ಮೂಲಕ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಅತ್ಯಂತ ಕಳಕಳಿಯ ಮನವಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಮೂಲಕ ನುಡಿದಂತೆ ನಡೆದಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಗಳಿಗೆ ಅರ್ಶೀವಾದಿಸಿದಂತೆ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಆರ್ಶೀವಾದಿಸಿ ಎಂದು ಮತದಾರರಲ್ಲಿ ಮಧ್ವನಿ ಮನವಿ ಮಾಡಿಕೊಂಡಿದ್ದಾರೆ.

ಸಿಎಂ ಧ್ವನಿ ಕೇಳಿ ಪುಳಕ :  

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ವನಿ ಮುದ್ರಿತ ಸಂದೇಶ ಆಲಿಸಿದ ಮೈಸೂರಿನ ರಾಮಕೃಷ್ಣನಗರದ ನಿವಾಸಿ ಉಮಾಶಂಕರ್‌ ಪುಳಕಗೊಂಡಿದ್ದಾರೆ. ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಅವರು, ಯುಗಾದಿ ಹಬ್ಬದ ದಿನದಂದು ಮೊಬೈಲ್‌ ಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತು. ಕಾಲ್‌ ರಿಸೀವ್‌ ಮಾಡಿದಾಗ ಆಶ್ಚರ್ಯವಾಯಿತು.  ಆರಂಭದಲ್ಲಿ ಖುದ್ದು ಸಿದ್ದರಾಮಯ್ಯ ಅವರೇ ಕರೆ ಮಾಡಿದ್ದಾರೇನೋ ಅನ್ನಿಸಿತು. ಯುಗಾದಿ ಶುಭಾಶಯದ ಜತೆಗೆ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, ಮೈಸೂರು ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್‌ ಅವರನ್ನ ಬೆಂಬಲಿಸುವಂತೆ ಮನವಿ ಮಾಡಿದರು. ಸಿದ್ದರಾಮಯ್ಯ ಅವರ  ಈ ಧ್ವನಿ ಮುದ್ರಿತ ಸಂದೇಶ ಅತ್ಯಂತ ಆಪ್ತವಾಗಿತ್ತು ಎಂದರು.

key words : cm, Siddaramaiah, Teli call, phone call, campaign

 

ENGLISH SUMMARY : 

Taking the current Lok Sabha elections seriously, Chief Minister Siddaramaiah is determined to win more than 20 seats in the state for which he has fielded MLAs and former MLAs to seek votes.

This is the first time that Chief Minister Siddaramaiah has started campaigning through tele-caller. Congress candidate from Mysuru-Kodagu Lok Sabha constituency M. Siddaramaiah has sought votes for Laxman.

 

 

Tags :
Campaign.CMphone callSiddaramaiahTeli call
Next Article