HomeBreaking NewsLatest NewsPoliticsSportsCrimeCinema

ರಾಮಕೃಷ್ಣ ಹೆಗಡೆ ನನ್ನ ಆದರ್ಶ ವ್ಯಕ್ತಿ ಎನ್ನುತ್ತಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ- ರಘು ಕೌಟಿಲ್ಯ

03:14 PM Aug 17, 2024 IST | prashanth

ಮೈಸೂರು,ಆಗಸ್ಟ್,17,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಷಿಕ್ಯೂಷನ್ ಗೆ ಅನುಮತಿ  ನೀಡಿರುವವುದು ಸ್ವಾಗತಾರ್ಹ. ರಾಮಕೃಷ್ಣ ಹೆಗಡೆ ನನ್ನ ಆದರ್ಶ ವ್ಯಕ್ತಿ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಬಿಜೆಪಿ ಮುಖಂಡ ರಘು ಕೌಟಿಲ್ಯ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ರಘು ಕೌಟಿಲ್ಯ, ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೊಡಬಾರದು ಅಂತೇನಿಲ್ಲ. ನೀವು ಸದನದಲ್ಲಿ ಉತ್ತರ ನೀಡಿದ್ರೆ ನಾವು ಪಾದಯಾತ್ರೆ ಮಾಡುತ್ತಿರಲಿಲ್ಲ. ಮುಡಾದಲ್ಲಿ ಸಾಕಷ್ಟು ಅಕ್ರಮ ನಿವೇಶನ ಹಂಚಲಾಗಿದೆ. ಇದರ ವಿರುದ್ಧ ನಮ್ಮ ಹೋರಾಟ. ಈ ತನಿಖೆ ನ್ಯಾಯಯುತವಾಗಿ ನಡೆಯಲು ಸಿಎಂ ನೈತಿಕತೆ ಹೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಕರ್ನಾಟಕದ ರಾಜಕಾರಣದಲ್ಲಿ ದೊಡ್ಡ ಪರಂಪರೆ ಇದೆ. ರಾಮಕೃಷ್ಣ ಹೆಗಡೆ ಅವರು ಒಂದೇ ಒಂದು ಟೆಲಿಫೋನ್ ಪ್ರಕರಣದಲ್ಲಿ ರಾಜಿನಾಮೆ ನೀಡಿದರು. ರಾಮಕೃಷ್ಣ ಹೆಗಡೆ ನನ್ನ ಆದರ್ಶ ವ್ಯಕ್ತಿ ಅಂತ ಹೇಳುತ್ತಿದ್ದ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿ ತನಿಖೆ ಎದುರಿಸಬೇಕು. ಹಿಂದುಳಿದ ವರ್ಗಗಳ ಟ್ರಂಪ್ ಕಾರ್ಡ್ ಬಳಸಿಕೊಳ್ಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಭಾರಿ ಅನ್ಯಾಯವಾಗಿದೆ. ಹಿಂದುಳಿದ ವರ್ಗದ ಚಾಂಪಿಯನ್ ಅಂತ ಹೇಳಿಕೊಳ್ಳುವ ನೈತಿಕತೆಯೂ ಇಲ್ಲ ಸಂವಿಧಾನದಡಿ ರಾಜಿನಾಮೆ ಕೊಟ್ಟು ಪ್ರಕರಣ ಎದುರಿಸಲಿ. ನಿರ್ದೋಷಿ ಎಂದು ಸಾಬೀತು ಪಡಿಸಲಿ ಎಂದು ರಘು ಕೌಟಿಲ್ಯ  ವಾಗ್ದಾಳಿ ನಡೆಸಿದರು.

ಸತ್ಯಕ್ಕೆ ಯಾವತ್ತಿದ್ರೂ ಜಯ ಸಿಕ್ಕೇ ಸಿಗುತ್ತದೆ- ಬಿಜೆಪಿ ಮುಖಂಡ ಮೋಹನ್ ಹೇಳಿಕೆ

ಸಿಎಂ ವಿರುದ್ಧ ಪ್ರಾಷಿಕ್ಯೂಶನ್ ಗೆ ಅನುಮತಿ ನೀಡಿದ ಬೆನ್ನಲ್ಲೇ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಮುಖಂಡ ಮೋಹನ್, ಸತ್ಯಕ್ಕೆ ಯಾವತ್ತಿದ್ರೂ ಜಯ ಸಿಕ್ಕೇ ಸಿಗುತ್ತದೆ. ಮುಡಾ ಹಗರಣ ಬಗ್ಗೆ ಶಾಸಕ ಶ್ರೀವತ್ಸ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಅಂದಿನ ಕಮಿಷನರ್ ಆಗಿದ್ದ ನಟೇಶ್, ದಿನೇಶ್, ಮುಡಾ ಸಭೆಯ ಗಮನಕ್ಕೆ ತರದೇ, ಸರ್ಕಾರದ ಗಮನಕ್ಕೆ ತರದೇ ಹಂಚಿರೋದು ನಮ್ಮ ಗಮನಕ್ಕೆ ಬಂದಿದೆ. ಮೊದಲು ಸರ್ಕಾರದ ಗಮನಕ್ಕೆ ತಂದಾಗ ನಮ್ಮ ಹೇಳಿಕೆಗೆ ಮನ್ನಣೆ ನೀಡಲಿಲ್ಲ. ಬಳಿಕ ಐಎಎಸ್ ಅಧಿಕಾರಿಗಳ ತಂಡ ರಚನೆ ಮಾಡಿತು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಬಂದು ಕಡತಗಳನ್ನ ಬೆಂಗಳೂರಿಗೆ ಕೊಂಡೋಯ್ಯುತ್ತಾರೆ. ಮೈಸೂರು ಭಾಗದ ಶಾಸಕರಿಗೆ ಆಹ್ವಾನ ನೀಡಿದ ಭೈರತಿ ಸುರೇಶ್, ದೂರು ನೀಡಿದ ಶಾಸಕ ಶ್ರಿವತ್ಸರಿಗೆ ಆಹ್ವಾನ ನೀಡೋದಿಲ್ಲ. ಇದರಲ್ಲೇ ತಿಳಿಯುತ್ತೆ ಸರ್ಕಾರದ ದ್ವಂದ್ವ ನಿಲುವು ಎಂದು ಕಿಡಿಕಾರಿದರು.

Key words: Siddaramaiah, resign, investigation, Raghu Kautilya

Tags :
investigationRaghu KautilyaresignSiddaramaiah
Next Article