ಸಿದ್ದರಾಮಯ್ಯಗೆ ನೈತಿಕತೆ ಇದ್ದರೇ ರಾಜೀನಾಮೆ ನೀಡಲಿ- ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹ
12:17 PM Nov 24, 2023 IST
|
prashanth
ಬೆಂಗಳೂರು,ನವೆಂಬರ್,24,2023(www.justkannada.in): ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ತನಿಖೆಗೆ ನೀಡಿದ ಅನುಮತಿ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗೋವಿಂದ ಕಾರಜೋಳ, ಇದು ಸರ್ಕಾರದ ಸಂವಿಧಾನ ಬಾಹಿರ ತೀರ್ಮಾನ ನೈತಿಕತೆ ಇದ್ದರೇ ಸಿಬಿಐ ತನಿಖೆ ವರದಿ ಬರುವ ತನಕ ಕಾಯಬೇಕಿತ್ತು. ಯಾರ ಒತ್ತಡಕ್ಕೆ ಮಣಿದು ಈ ನಿರ್ಧಾರ ಮಾಡಿದ್ದಾರೆ ಎಂಬುದನ್ನ ಬಹಿರಂಗಪಡಿಸಬೇಕು. ಸೋನಿಯಾ ರಾಹುಲ್ ಗಾಂಧಿ ಒತ್ತಡಕ್ಕೆ ಮಣಿದ್ರಾ..? ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
Key words: Siddaramaiah- resign - morals- former minister- Govinda Karajola
Next Article