For the best experience, open
https://m.justkannada.in
on your mobile browser.

ಸಿದ್ದರಾಮಯ್ಯ ಪುತ್ರ ವಿದೇಶಕ್ಕೆ ಹೋದಾಗ ಅನುಮತಿ ಪಡೆದಿದ್ರಾ..? ಅಲ್ಲಿನ ಘಟನೆ ಬಗ್ಗೆ ಯಾಕೆ ತನಿಖೆ ಮಾಡಲಿಲ್ಲ..? ಮಾಜಿ ಸಿಎಂ ಹೆಚ್.ಡಿಕೆ.

12:35 PM May 25, 2024 IST | prashanth
ಸಿದ್ದರಾಮಯ್ಯ ಪುತ್ರ ವಿದೇಶಕ್ಕೆ ಹೋದಾಗ ಅನುಮತಿ ಪಡೆದಿದ್ರಾ    ಅಲ್ಲಿನ ಘಟನೆ ಬಗ್ಗೆ ಯಾಕೆ ತನಿಖೆ ಮಾಡಲಿಲ್ಲ    ಮಾಜಿ ಸಿಎಂ ಹೆಚ್ ಡಿಕೆ

ಬೆಂಗಳೂರು,ಮೇ,25,2024 (www.justkannada.in): ಮನೆಯವರಿಗೆ ತಿಳಿಸದೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾನೆಯೇ..? ಎಂದು ಪ್ರಶ್ನಿಸಿದ್ದ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

2016ರಲ್ಲಿ ರಾಕೇಶ್ ಸಿದ್ದರಾಮಯ್ಯ ವಿದೇಶಕ್ಕೆ ತೆರಳಿದ್ದ ವಿಚಾರ ಪ್ರಸ್ತಾಪಿಸಿರುವ ಹೆಚ್.ಡಿ ಕುಮಾರಸ್ವಾಮಿ, ಪ್ರಜ್ವಲ್ ಪ್ರಕರಣ ಸಂಬಂಧ ಸಿಎಂ ಸೇರಿ ಯಾರಿಗೂ ಸಹ ಸತ್ಯ ಹೊರತರಬೇಕು ಅನ್ನಿಸುತ್ತಿಲ್ಲ ದೇವರಾಜೇಗೌಡರನ್ನೇ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಾರೆ. ಹಾಗಾಗಿ ನಾನು ಸಿಎಂಗೆ ಒಂದು ಪ್ರಶ್ನೆ ಕೇಳುತ್ತೇನೆ.  ಇವರ ಮಗ ವಿದೇಶಕ್ಕೆ ಹೋದಾಗ ದುರ್ಘಟನೆ ನಡೆಯಿತು ಅಲ್ವಾ..? ಸಿಎಂ ಸಿದ್ದರಾಮಯ್ಯ ಪುತ್ರ ಯಾವ  ಕಾರ್ಯಕ್ರಮಕ್ಕೆ ವಿದೇಶಕ್ಕೆ ಹೋಗಿದ್ದರು.?  ಆಗ ವಿದೇಶಕ್ಕೆ ಹೋಗುವಾಗ ಅನುಮತಿ ಪಡೆದಿದ್ದರಾ ..?  ಇವರ ಮಗನ ಜೊತೆ ಯಾರು ಯಾರು ಹೋಗಿದ್ದರು..? ಎಷ್ಟು ಜನ ಹೋಗಿದ್ರು...? ಅಲ್ಲಿನ ಘಟನೆ ಬಗ್ಗೆ ಯಾಕೆ ತನಿಖೆ ಮಾಡಲಿಲ್ಲ.  ಬೆಳೆದ ಮಕ್ಕಳು ಪ್ರತಿ ವಿಚಾರವನ್ನ ತಂದೆ ತಾಯಿಗೆ ಹೇಳಿ ಮಾಡ್ತಾರಾ ..? ಎಂದು ಪ್ರಶ್ನಿಸಿದರು.

ಇನ್ನು ಚೆನ್ನಗಿರಿಯ್ಲಿ ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರ ಹಾಗೂ ಅಧಿಕಾರಿಗಳಿಗೆ ಗೌರವ ಕೊಡುವ ವಾತವರಣ ಇಲ್ಲ .ಪೊಲೀಸರಿಗೆ ಗೌರವವಿಲ್ಲ.  ಯಾಕೆ ಅಂದರೇ ಸರ್ಕಾರ  ಆ ರೀತಿ ಇದೆ  ಈ ಸರ್ಕಾರ  ಬಗ್ಗೆ ಅಧಿಕಾರಿಗಳು ಜನರಿಗೆ ವಿಶ್ವಾಸವಿಲ್ಲ ಎಂದರು.

Key words: Siddaramaiah, Son, abroad, HDK

Tags :

.