For the best experience, open
https://m.justkannada.in
on your mobile browser.

ಕಾವೇರಿಗೆ ಜು. 27 ರಂದು "ಬಾಗಿನ" ಅರ್ಪಿಸಲಿರುವ ಸಿಎಂ ಸಿದ್ದರಾಮಯ್ಯ.

01:12 PM Jul 21, 2024 IST | mahesh
ಕಾವೇರಿಗೆ ಜು  27 ರಂದು  ಬಾಗಿನ  ಅರ್ಪಿಸಲಿರುವ ಸಿಎಂ ಸಿದ್ದರಾಮಯ್ಯ

ಮೈಸೂರು, ಜು.21,2024: (www.justkannada.in news) ರಾಜ್ಯದಲ್ಲಿ ವರುಣನ ಕೃಪೆಯಿಂದಾಗಿ ಕಳೆದ ಕೆಲದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಪರಿಣಾಮ ಕನ್ನಡ ನಾಡಿನ ಜೀವನದಿ ಕಾವೇರಿ ತುಂಬಿ ಹರಿಯುತ್ತಿದ್ದಾಳೆ. ಈ ಹಿನ್ನೆಲೆಯಲ್ಲಿ ಜು. ೨೭ ರಂದು ತಾಯಿ ಕಾವೇರಿಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸಲಾಗಿದೆ.

ಅಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಸಚಿವ ಸಂಪುಟದ ಸಹೊದ್ಯೋಗಿಗಳು ಹಾಗೂ ಮೈಸೂರು-ಮಂಡ್ಯ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ.

50,000 ಕ್ಯೂಸೆಕ್ ನೀರು‌ :

ಕೆ.ಆರ್.ಎಸ್ ಜಲಾಶಯದಿಂದ ಸುಮಾರು 50,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಕಾವೇರಿ ನದಿಯ ತಗ್ಗು ಪ್ರದೇಶದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ. ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಾನಗಳಿಗೆ ತೆರಳಲು ಕಾವೇರಿ ನೀರವರಿ ನಿಗಮದ ಅಧಿಕಾರಿಗಳ ಸೂಚನೆ.

ಪ್ರವಾಹ ಭೀತಿ:

ಕಬಿನಿ ಕೆಆರ್ ಎಸ್ ಜಲಾಶಯದಿಂದ ಬಾರಿ ಪ್ರಮಾಣದ ನೀರು ನದಿಗೆ ಬಿಡುಗಡೆ. ಕಾವೇರಿ, ಕಪಿಲೆ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹಿನ್ನೆಲೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಭೇಟಿ. ಟಿ ನರಸೀಪುರ ತಾಲ್ಲೂಕಿಗೆ ಡಿಸಿ ಲಕ್ಷ್ಮಿಕಾಂತ ರೆಡ್ಡಿ ಭೇಟಿ.

ತಾಲ್ಲೂಕಿನ ಕೆಂಡನಕೊಪ್ಪಲು, ಗುಂಜಾನರಸಿಂಹಸ್ವಾಮಿ ದೇವಸ್ಥಾನ, ತಲಕಾಡು ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ. ಪ್ರವಾಹ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಡಿಸಿ. ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ.

ಬರ್ಡ್‌ ಸೆಂಚುರಿ ಬಂದ್‌ :

ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನಲೆ. ಕೆಆರ್ಎಸ್ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ. ಪಕ್ಷಿಧಾಮಕ್ಕೂ ತಾತ್ಕಾಲಿಕ ನಿರ್ಬಂಧ. ಮುಂದಿನ‌ ಆದೇಶದವರಗೆ ನಿಷೇಧ  ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿಎಂ ಶರಣಬಸಪ್ಪ ರಿಂದ ಆದೇಶ.

ಪ್ರವಾಸಿಗರ ಹಿತ ದೃಷ್ಟಿಯಿಂದ ಈಗಾಗಲೇ ದೋಣಿ ವಿಹಾರಕ್ಕೂ ನಿಷೇದ. ಈಗ ಪಕ್ಷಿಧಾಮಕ್ಕೂ ತಾತ್ಕಾಲಿಕ ನಿರ್ಬಂಧ.

ತಗಿದ್ದ ವರುಣಾರ್ಭಟ :

ಕಬಿನಿ ಜಲಾನಯನ ಪ್ರದೇಶದಲ್ಲಿ ತಗಿದ್ದ ವರುಣಾರ್ಭಟ. ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಇಳಿಕೆ. ಕಬಿನಿ ಜಲಾಶಯದ ಇಂದಿನ ಒಳ ಹರಿವು 39,396 ಕ್ಯೂಸೆಕ್. ಹೊರ ಹರಿವು 35,917 ಕ್ಯೂಸೆಕ್. ಜಲಾಶಯದ ಇಂದಿನ ಮಟ್ಟ 2281.23 ಅಡಿ, ಗರಿಷ್ಠ ಮಟ್ಟ 2284 ಅಡಿ. ಹೊರ ಹರಿವಿನಲ್ಲಿ ಇಳಿಕೆ ಹಿನ್ನೆಲೆ. ನದಿ ತೀರದಲ್ಲಿ ಜಲಾವೃತಗೊಂಡಿದ್ದ ಗ್ರಾಮಗಳಲ್ಲಿ ಪ್ರವಾಹ ಇಳಿಕೆ. ಕೊಂಚ ನಿಟ್ಟುಸಿರು ಬಿಟ್ಟ ಪ್ರವಾಹ ಪೀಡಿತ ಪ್ರದೇಶದ ಜನರು.

key words:  Cm, Siddaramaiah, to offer, "BAGINA", to Cauvery, on 27th.

Tags :

.