HomeBreaking NewsLatest NewsPoliticsSportsCrimeCinema

ಸಿದ್ಧರಾಮಯ್ಯ ಅವರೇ 5 ವರ್ಷ ಸಿಎಂ ಆಗಿರುತ್ತಾರೆ- ಸಚಿವ ಹೆಚ್.ಸಿ ಮಹದೇವಪ್ಪ.

12:49 PM Oct 28, 2023 IST | prashanth

ಬೆಂಗಳೂರು,ಅಕ್ಟೋಬರ್,28,2023(www.justkannada.in): ಸಿದ್ಧರಾಮಯ್ಯ ಅವರೇ 5 ವರ್ಷವೂ ಮುಖ್ಯಮಂತ್ರಿಯಾಗಿರುತ್ತಾರೆ. ಸಿಎಂ ಬದಲಾವಣೆ ಆಗಲ್ಲ  ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸಿಎಂಆಗಿ  ಸಿದ್ಧರಾಮಯ್ಯ  ಐದು ವರ್ಷ ಇರುತ್ತಾರೆ. ಬದಲಾಗಲ್ಲ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ.  ಗೃಹ ಸಚಿವ ಪರಮೇಶ್ವರ್  ರನ್ನು ಸಿಎಂ ಮಾಡುವುದಿಲ್ಲ ಎಂದರು.

ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ.  ಆಫರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ  ಸಚಿವ ಹೆಚ್.ಸಿ ಮಹದೇವಪ್ಪ, ಬೋಗಿ ಅಲ್ಲಾಡುತ್ತೆ ಅಷ್ಟೆ. ಆದರೆ ಟ್ರೈನ್ ಬೀಳಲ್ಲ ಎಂದು ಲೇವಡಿ ಮಾಡಿದರು.

Key words: Siddaramaiah - will be -CM - 5 years – Minister- HC Mahadevappa.

Tags :
Siddaramaiah - will be -CM - 5 years – Minister- HC Mahadevappa.
Next Article