For the best experience, open
https://m.justkannada.in
on your mobile browser.

ನ್ಯಾಯಾಧೀಶರಾಗಿ ಸಿಲ್ವರ್ ಜ್ಯುಬಿಲಿ - ನ್ಯಾಯಮೂರ್ತಿ ಸಿ ಚಂದ್ರಶೇಖರ್ ಅವರ ಸಾರ್ಥಕ ಸೇವೆ

03:08 PM Aug 02, 2024 IST | prashanth
ನ್ಯಾಯಾಧೀಶರಾಗಿ ಸಿಲ್ವರ್ ಜ್ಯುಬಿಲಿ   ನ್ಯಾಯಮೂರ್ತಿ ಸಿ ಚಂದ್ರಶೇಖರ್ ಅವರ ಸಾರ್ಥಕ ಸೇವೆ

ಮೈಸೂರು, ಆಗಸ್ಟ್,2, 2024 : ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ನಮ್ಮ ಪ್ರಜಾಪ್ರಭುತ್ವದಲ್ಲಿ ತಮ್ಮದೆ ಆದ ಮಹತ್ವವನ್ನು ಹೊಂದಿದೆ. ಅದರಲ್ಲೂ ನ್ಯಾಯಾಂಗ ಹೆಮ್ಮೆಯ ಗೌರವದ ಪ್ರತೀಕವಾಗಿದೆ. ಇಂತಹ ಗೌರವಯುವ ನ್ಯಾಯಾಂಗ ವ್ಯವಸ್ಥೆಯಲ್ಲಿ ನಮ್ಮ‌ ಪ್ರೀತಿಯ ನ್ಯಾಯಮೂರ್ತಿಗಳಾದ ಸಿ ಚಂದ್ರಶೇಖರ್ ಅವರು ಒಂದಲ್ಲ ಎರಡಲ್ಲ ಬರೋಬ್ಬರಿ 25 ವರ್ಷ ಪೂರೈಸಿದ್ದಾರೆ. ಸಾಹೇಬರು ಹೇಳಿ ಕೇಳಿ ಸರಳ‌ ಸಜ್ಜನ ವ್ಯಕ್ತಿತ್ವದವರು. ಸದಾ ಬಡವರ ಹಾಗೂ ನ್ಯಾಯದ ಪರ ಮಿಡಿಯುವ ಗುಣವುಳ್ಳವರು. ಅವರ ಈ ಅಮೋಘ ಸಾಧನೆಯನ್ನು ಲಾ ಗೈಡ್ ಕನ್ನಡ ಬಳಗ ಅಭಿನಂದಿಸುತ್ತದೆ. ಅವರು ನ್ಯಾಯಾಂಗದ ಸೇವೆ ಇದೇ ರೀತಿ ಮುಂದಿವರಿಯಲಿ ಎಂದು ಹಾರೈಸುತ್ತದೆ.

ನ್ಯಾಯಮೂರ್ತಿ ಸಿ ಚಂದ್ರಶೇಖರ್

ಸಿ ಚಂದ್ರಶೇಖರ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಗ್ರಾಮದವರು. ಬಡ ಮಧ್ಯಮ ರೈತ ಕುಟುಂಬದಲ್ಲಿ ಹುಟ್ಟಿದ ಶ್ರೀಯುತರು ತಮ್ಮ ಶಿಕ್ಷಣವನ್ನು ಮುಗಿಸಿ ಬೆಂಗಳೂರು ನಗರದಲ್ಲಿ ತಮ್ಮ‌ ವಕೀಲ ವೃತ್ತಿಯನ್ನು ಆರಂಭಿಸಿದರು. ವಕೀಲರಾಗಿ ತಮ್ಮ ಬಳಿ ಬಂದ ಕಕ್ಷಿದಾರನ್ನು ಅತ್ಯಂತ ಆತ್ಮೀಯವಾಗಿ ಗೌರವಯುತವಾಗಿ ನಡೆಸಿಕೊಂಡು ತಮ್ಮ ವೃತ್ತಿಯನ್ನು ನಡೆಸುತ್ತಿದ್ದರು. ಮೊದಲ ದಿನದಿಂದಲೂ ಅವರಿಗೆ ನ್ಯಾಯಾಂಗದ ಬಗ್ಗೆ ಅಪಾರವಾದ ಗೌರವ. ಇದಕ್ಕೆ ಕಾರಣ ಈ ವ್ಯವಸ್ಥೆಯಲ್ಲಿದ್ದ ಸಮಾನತೆ. ಬಡವ ಶ್ರೀಮಂತ ಜಾತಿ ಧರ್ಮ ಭೇದವಿಲ್ಲದೆ ಇರುವ ಏಕೈಕ ಕ್ಷೇತ್ರ ಅದು ನ್ಯಾಯಾಂಗ ಅಂತಾ. ಸಮಯ ಸಿಕ್ಕಾಗಲೆಲ್ಲಾ ಎಲ್ಲರಿಗೂ ಈ ವಿಚಾರ ತಿಳಿಸುವ ಕೆಲಸವನ್ನು ಆತ್ಯಂತ ಹೆಮ್ಮೆಯಿಂದ ಅವರು ಮಾಡುತ್ತಿದ್ದರು. ಇದರ ಜೊತೆಗೆ ಅವರ ಸಮಯಪ್ರಜ್ಞೆ ಹಾಗೂ ಕೆಲಸದ ಬಗ್ಗೆ ಇದ್ದ ತುಡಿತ ಅನನ್ಯವಾದದ್ದು. ಅವರ ವೃತ್ತಿ ಜೀವನದಲ್ಲಿ ಯಾರಿಗೂ ನೋವು ಮಾಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಅಜಾತಶತ್ರುವಾಗಿದ್ದರು. ಅವರ ಕೆಲಸದ ಮೇಲಿನ ಗೌರವ ಶಿಸ್ತು ಶ್ರದ್ದೆ ಅವರನ್ನು 1999ರಲ್ಲಿ ಪವಿತ್ರವಾದ ನ್ಯಾಯಾಧೀಶರ ಹುದ್ದೆಗೆ ಕರೆದುಕೊಂಡು ಹೋಗಿ ಕೂರಿಸಿತು. ಸಾಹೇಬರ ಮೊದಲು ನ್ಯಾಯಾಧೀಶರಾಗಿ ನೇಮಕಗೊಂಡಿದ್ದು ಕಡಲತಡಿ ಬಂದರುಗಳ‌ ನಗರ ಮಂಗಳೂರಿನ ಪುತ್ತೂರಿನಲ್ಲಿ. 1999 ರಿಂದ 2002ರವೆಗೆ ಪುತ್ತೂರು ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಅದಾದ ನಂತರ. 2009ರವರೆಗೆ ಮಧುಗಿರಿ, ಆನೇಕಲ್ ಹೊಸಕೋಟೆ ದೇವನಹಳ್ಳಿಯಲ್ಲಿ ಸಿವಿಲ್ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದರು. ನಂತರ 2009ರಲ್ಲಿ ಅವರಿಗೆ ಸೀನಿಯರ್ ಸಿವಿಲ್‌ ನ್ಯಾಯಾಧೀಶರಾಗಿ ಬಡ್ತಿ ಸಿಕ್ಕಿತು ಬೆಂಗಳೂರು ನ್ಯಾಯಾಲಯಕ್ಕೆ ನೇಮಕಗೊಂಡರು. 2012ರವೆರೆಗೆ ಅಲ್ಲಿ ಸೇವೆ ಸಲ್ಲಿಸಿದ ನಂತರ 2012ರಲ್ಲಿ ಮೈಸೂರು ಜಿಲ್ಲೆ ಟಿ ನರಸೀಪುರದ ನ್ಯಾಯಾಲಯಕ್ಕೆ ನೇಮಕಗೊಂಡು 2015ರವೆಗೆ ಅಲ್ಲಿ ಸೇವೆ ಸಲ್ಲಿಸಿದರು. ಅದಾದ ನಂತರ 2015ರಲ್ಲಿ ಮೈಸೂರು ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾಗಿ ಶ್ರೀಯುತರನ್ನು ನೇಮಕ ಮಾಡಲಾಯಿತು.

ಶೋಷಿತರ ಧ್ವನಿ - ಶೀಘ್ರ ನ್ಯಾಯ ನೀಡಿಕೆಗೆ ಕ್ರಮ

ನ್ಯಾಯಾಮೂರ್ತಿ ಸಿ ಚಂದ್ರಶೇಖರ್ ಅವರು ಸದಾ ಕಾಲ ಅನ್ಯಾಯಕ್ಕೊಳಗಾದವರ ಧ್ವನಿಯಾಗಿ ಕೆಲಸ ಮಾಡುತ್ತಾರೆ ಅನ್ನೋದು ಎಲ್ಲರಲ್ಲೂ ಜನಜನಿತವಾಗಿದೆ. ಸಾಹೇಬರು ಬೆಂಚ್‌ನಲ್ಲಿ ಕುಳಿತಿದ್ದಾರೆ ಅಂದರೆ ನೊಂದವರಿಗೆ ನ್ಯಾಯ ಸಿಗೋದು ಗ್ಯಾರಂಟಿ ಅಂತಲೇ ಬಹುತೇಕರು ಭಾವಿಸುತ್ತಾರೆ. ಸಾಹೇಬರು ಎಲ್ಲೂ ಎಂದು ಯಾವುದೇ ಉದ್ವೇಗಕ್ಕೆ ಒಳಗಾಗದೆ ನ್ಯಾಯಸಮ್ಮತವಾದ ತೀರ್ಪುಗಳನ್ನು ನೀಡಿ ಎಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಮಂಗಳೂರು ಬೆಂಗಳೂರು ಮೈಸೂರಿನ ಬಹುತೇಕ ವಕೀಲರು ಸಾಹೇಬರ ಅಭಿಮಾನಿಗಳಾಗಿದ್ದಾರೆ. ಅವರ ಸರಳತೆ ಎಲ್ಲರಿಗೂ ಮಾದರಿಯಾಗಿದೆ. ಸಮಾಜಕ್ಕೆ ಒಂದು ಧನಾತ್ಮಕ ಸಂದೇಶ ಕೊಡಬೇಕು ಅನ್ನೋದು ಸಾಹೇಬರ ಕನಸು. ತಾವು ನ್ಯಾಯಾಧೀಶರಾಗಿ ಸೇವೆ ಆರಂಭಿಸಿದ ದಿನ ತೆಗೆದುಕೊಂಡ ತಪಥದಂತೆ ನಡೆಯುತ್ತಿರುವ ಶ್ರೀಯುತರಿಗೆ ಲಾಗೈಡ್ ಬಳಗ ತುಂಬು ಹೃದಯದಿಂದ ಅಭಿನಂದಿಸುತ್ತದೆ.

ಹೆಚ್ ಎನ್ ವೆಂಕಟೇಶ್

ಹಿರಿಯ ವಕೀಲರು

ಗೌರವ ಸಂಪಾದಕರು

ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ

ಮೈಸೂರು

Tags :

.