ಶಾಸಕ ಮುನಿರತ್ನ ವಿರುದ್ದ ಎಸ್ ಐಟಿ ತನಿಖೆಯಾಗಬೇಕು- ಸಚಿವ ಚಲುವರಾಯಸ್ವಾಮಿ
10:58 AM Sep 20, 2024 IST | prashanth
ಬೆಂಗಳೂರು,ಸೆಪ್ಟಂಬರ್,20,2024 (www.justkannada.in): ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಪ್ರಕರಣ ದಾಖಲಾಗಿದ್ದು ಈ ಸಂಬಂಧ ಎಸ್ ಐಟಿ ತನಿಖೆಯಾಗಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಶಾಸಕ ಮುನಿರತ್ನ ವಿರುದ್ದ ಎಸ್ ಐಟಿ ತನಿಖೆಯಾಗಬೇಕು. ಈ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ. ಈಗ ಒಳ್ಳಯ ಕೆಲಸಕ್ಕಿಂತ ತನಿಖೆಯಾಗುವುದು ಬಹಳ ಮುಖ್ಯ. ಮುನಿರತ್ನ ವಿರುದ್ದ ಹೋರಾಟ ಮಾಡಲು ಚಿಂತನೆ ನಡೆಸಿದ್ದೇವೆ. ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.
ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಮುನಿರತ್ನ ಇದೀಗ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮತ್ತೆ ಬಂಧನವಾಗಿದ್ದಾರೆ.
Key words: SIT ,investigation, against MLA Muniratna, Minister, Chaluvarayaswamy