For the best experience, open
https://m.justkannada.in
on your mobile browser.

ಎಸ್ಐಟಿ ಅನವಶ್ಯಕವಾಗಿ ಕೆಲವರನ್ನ ಬಂಧಿಸುತ್ತಿದೆ: ಮಾಜಿ ಸಿಎಂ ಕುಮಾರಸ್ವಾಮಿ

02:08 PM May 16, 2024 IST | prashanth
ಎಸ್ಐಟಿ ಅನವಶ್ಯಕವಾಗಿ ಕೆಲವರನ್ನ ಬಂಧಿಸುತ್ತಿದೆ  ಮಾಜಿ ಸಿಎಂ ಕುಮಾರಸ್ವಾಮಿ

ಮೈಸೂರು, ಮೇ 16, 2024 (www.justkannada.in): ಎಸ್ಐಟಿ ಅನವಶ್ಯಕವಾಗಿ ಕೆಲವರನ್ನ ಬಂಧಿಸುತ್ತಿದೆ. ದೇವೇರಾಜೇಗೌಡ ಅವರನ್ನು ಪ್ರಕರಣ ದಾಖಲಾಗಿ ಒಂದು ತಿಂಗಳ ನಂತರ ಬಂಧಿಸಿದ್ದು ಯಾಕೆ ಎಂದು ಹಾಸನ ಎಸ್ಪಿಗೆ ಮಾಜಿ ಸಿಎಂ ಎಚ್.ಡಿ ಕೆ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಎಸ್ಐಟಿಯವರಿಗೆ ದೇವೇರಾಜೇಗೌಡರಿಂದ ಏನು ಮಾಹಿತಿ ಬೇಕಿದೆ. ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಮಾಹಿತಿನಾ? ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿನಾ? ಅಥವಾ ಈ ಪ್ರಕರಣದ ಆಡಿತೋ ತುಣುಕು ಬಿಡುಗಡೆಯಾಗಿತ್ತಲ್ಲ ಅದರ ಮಾಹಿತಿ ಮಾಹಿತಿನಾ? ಎಂದು ಎಚ್ಡಿಕೆ ಪ್ರಶ್ನಿಸಿದರು.

ಏತಾಕ್ಕಾಗಿ ಎಸ್ಐಟಿ ನಾಲ್ಕು ದಿನದಿಂದ ಅವರನ್ನು ವಶಕ್ಕೆ ಪಡೆದುಕೊಂಡು ಇಟ್ಟುಕೊಂಡಿದೆ. ಈ ಪ್ರಕರಣದಲ್ಲಿ ಎರಡು ಭಾಗ ಇದೆ. ಒಂದು ವಿಡಿಯೋ ಮಾಡಿಕೊಂಡವನ ಅಪರಾಧ ಮತ್ತೊಂದು ಆ ವಿಡಿಯೋವನ್ನ ವೈರಲ್ ಮಾಡಿ ಕುಟುಂಬವನ್ನ ಬೀದಿಗೆ ತಂದವರದ್ದು. ಬೀದಿಗೆ ತಂದವರದ್ದು ಘೋರ ಅಪರಾಧ. ಆದರೆ ಎಸ್ಐಟಿ ವೈರಲ್ ಮಾಡಿದವರನ್ನ ಬಂಧಿಸುವಲ್ಲಿ ವಿಫಲವಾಗಿದೆ. ಆರೋಪಿ ಖಾಸಗಿ ಚಾಲನ್’ಗೆ ಸಂದರ್ಶನ ನೀಡುತ್ತಾನೆ. ಆದರೆ ಎಸ್ಐಟಿಗೆ ಸಿಗುತ್ತಿಲ್ಲ ಅಂದರೇ ಏನು ಅರ್ಥ? ಎಸ್ಐಟಿ ಸೂಕ್ತವಾದ ತನಿಖೆ ನಡೆಸುತ್ತಿಲ್ಲ. ಕೇಂದ್ರ ಸರ್ಕಾರ ರಾಜ ತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಎಸ್.ಐ.ಟಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸುಖ ಸುಮ್ಮನೆ  ಮೇಲೆ ಆರೋಪ ಮಾಡ್ತಿದ್ದಾರೆ ಎಂದು ದೂರಿದರು.

Tags :

.