For the best experience, open
https://m.justkannada.in
on your mobile browser.

ಮೇ 31ಕ್ಕೆ ಬಂದು SIT ಮುಂದೆ ಹಾಜರಾಗುತ್ತೇನೆ: ವಿದೇಶದಿಂದ ಪ್ರಜ್ವಲ್ ರೇವಣ್ಣರಿಂದ ವಿಡಿಯೋ ರಿಲೀಸ್.

04:09 PM May 27, 2024 IST | prashanth
ಮೇ 31ಕ್ಕೆ ಬಂದು sit ಮುಂದೆ ಹಾಜರಾಗುತ್ತೇನೆ  ವಿದೇಶದಿಂದ ಪ್ರಜ್ವಲ್ ರೇವಣ್ಣರಿಂದ ವಿಡಿಯೋ ರಿಲೀಸ್

ಬೆಂಗಳೂರು,ಮೇ,27,2024 (www.justkannada.in): ತಮ್ಮ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೆ ವಿದೇಶಕ್ಕೆ ಹಾರಿ ತಲೆಮರಿಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇದೀಗ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು ಮೇ 31ಕ್ಕೆ ಎಸ್ ಐಟಿ ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ವಿದೇಶದಿಂದಲೇ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ, ಮೇ 31ಕ್ಕೆ ಭಾರತಕ್ಕೆ ಬಂದು ಎಸ್ ಐಟಿ ಮುಂದೆ ಹಾಜರಾಗುತ್ತೇನೆ. ನನ್ನ ತಾತ, ತಂದೆ ತಾಯಿ, ಜನರಿಗೆ, ಜೆಡಿಎಸ್ ಕಾರ್ಯಕರ್ತರ ಬಳಿ ಕ್ಷಮೆ ಕೇಳುತ್ತೇನೆ. ನಾನು ಎಲ್ಲಾ ಕಾನೂನು ಹೋರಾಟ ಎದುರಿಸುವೆ ಎಂದಿದ್ದಾರೆ.

ಹಾಸನದಲ್ಲಿ ನನ್ನ ವಿರುದ್ದ ಕೆಲವರಿಂದ ಪಿತೂರಿ ನಡೆದಿದೆ. ಇದೆಲ್ಲದರಿಂದ ಬೇಸರವಾಗಿ ನಾನೆ ದೂರವಾಗಿದ್ದೆ.
ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ದೇವರ ಆಶೀರ್ವಾದ, ಜನರ ಆಶೀರ್ವಾದದಿಂದ ಗೆಲ್ಲುತ್ತೇನೆ.  ಏಪ್ರಿಲ್ 26 ರಂದು ನನ್ನ ವಿದೇಶಿ ಪ್ರವಾಸ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಹೋಗಿದ್ದು ಪ್ರೀಪ್ಲಾನ್ ಎಂದು ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಹೇಳಿದ್ದಾರೆ.

Key words: SIT , May 31,  Video, Prajwal Revanna

Tags :

.