For the best experience, open
https://m.justkannada.in
on your mobile browser.

15 ದಿನಗಳ ಕಾಲ ಪ್ರಜ್ವಲ್ ರೇವಣ್ಣರನ್ನ ಕಸ್ಟಡಿಗೆ ನೀಡುವಂತೆ ಎಸ್ ಐಟಿ ಮನವಿ: ಆದೇಶ ಕಾಯ್ದಿರಿಸಿದ ಕೋರ್ಟ್

04:00 PM May 31, 2024 IST | prashanth
15 ದಿನಗಳ ಕಾಲ ಪ್ರಜ್ವಲ್ ರೇವಣ್ಣರನ್ನ ಕಸ್ಟಡಿಗೆ ನೀಡುವಂತೆ ಎಸ್ ಐಟಿ ಮನವಿ  ಆದೇಶ ಕಾಯ್ದಿರಿಸಿದ ಕೋರ್ಟ್

ಬೆಂಗಳೂರು,ಮೇ,31,2024 (www.justkannada.in):  ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್ ಐ ಟಿ ಅಧಿಕಾರಿಗಳು ಬಂಧಿಸಿ ಇಂದು  ಬೆಂಗಳೂರಿನ 42ನೇ ಎಸಿ ಎಂ ಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು,  15 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

ಪ್ರಕರಣ ಸಂಬಂಧ ವಾದ ಪ್ರತಿವಾದಗಳು ಅಂತ್ಯವಾಗಿದ್ದು,  ನ್ಯಾಯಾಲಯವು ಸಂಜೆ 4:15ಕ್ಕೆ ಪ್ರಜ್ವಲ್ ರೇವಣ್ಣ  ಕಸ್ಟಡಿಗೆ ನೀಡಬೇಕೂ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೋ ಎಂಬ ಕುರಿತು ಆದೇಶ ಹೊರಡಿಸಲಿದೆ.

ಪ್ರಜ್ವಲ್ ರೇವಣ್ಣ ಪರವಾಗಿ ವಕೀಲ ಅರುಣ್ ಅವರು ವಾದ ಮಂಡಿಸಿದರು.  ಎಸ್‌ಐಟಿ ಪರ ಎಸ್‌ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿದರು.

Key words: SIT, Prajwal Revanna, custody ,  Court

Tags :

.