For the best experience, open
https://m.justkannada.in
on your mobile browser.

ಟಿಕೆಟ್ ಸಿಗದೆ ಬುರ್ಖಾ ಸ್ಟೂಡೆಂಟ್ ನಿಂದ ಗೇಲಿಗೊಳಗಾಗುವ ಪರಿಸ್ಥಿತಿ- ಪಕ್ಷದ ವಿರುದ್ದ ಪ್ರತಾಪ್ ಸಿಂಹ ಪರೋಕ್ಷ ಅಸಮಾಧಾನ..?

11:00 AM Jun 03, 2024 IST | prashanth
ಟಿಕೆಟ್ ಸಿಗದೆ ಬುರ್ಖಾ ಸ್ಟೂಡೆಂಟ್ ನಿಂದ ಗೇಲಿಗೊಳಗಾಗುವ ಪರಿಸ್ಥಿತಿ  ಪಕ್ಷದ ವಿರುದ್ದ ಪ್ರತಾಪ್ ಸಿಂಹ ಪರೋಕ್ಷ ಅಸಮಾಧಾನ

ಮೈಸೂರು,ಜೂನ್,3,2024 (www.justkannada.in): ಲೋಕಸಭೆ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗದೆ ನಿರಾಸರಾಗಿದ್ದ ಸಂಸದ ಪ್ರತಾಪ್ ಸಿಂಹ ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲಿ ರಘುಪತಿ ಭಟ್ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷದ ವಿರುದ್ದವೇ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಹೌದು, ಈ ಸಂಬಂಧ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಸಂಸದ ಪ್ರತಾಪ್ ಸಿಂಹ ಮಾಡಿರುವ ಒಂದು ಪೋಸ್ಟ್ ಅಚ್ಚರಿ ಮೂಡಿಸಿದೆ.  ಟಿಕೆಟ್ ಸಿಗದಿದ್ದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ  ರಘುಪತಿ ಭಟ್  ಅವರ ಪರವಾಗಿ  ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ

ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ  ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ MLA ಟಿಕೆಟ್ಟೂ ಸಿಗಲಿಲ್ಲ, MLC ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಛಾಟನೆಗೆ ಒಳಗಾಗಿ ಬುರ್ಖಾ ಸ್ಟೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ. ಎಂದು ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ.

Key words: situation -ticket- Prathap Simha- post

Tags :

.