ಮೈಸೂರಿನ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಕನಸಿನ "ಸ್ಮಾರ್ಟ್ ವಿಲೇಜ್"
ಮೈಸೂರು,ಜುಲೈ,4,2024 (www.justkannada.in): ಜುಲೈ 6 ರಂದು ನಗರದ ಹೊರವಲಯದ ಎಚ್ ಡಿ ಕೋಟೆ ರಸ್ತೆಯ ಪೂರ್ಣ ಚೇತನ ಶಾಲೆಯಲ್ಲಿ 7 ರಿಂದ 10ನೇ ತರಗತಿಯವರೆಗಿನ 136 ವಿದ್ಯಾರ್ಥಿಗಳನ್ನೊಳಗೊಂಡ 68 ತಂಡಗಳು ‘ಸ್ಮಾರ್ಟ್ ವಿಲೇಜ್’ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಿದ್ದಾರೆ.
ಜುಲೈ 6 ಶನಿವಾರ ಬೆಳಗ್ಗೆ 6.30ಕ್ಕೆ ಆರಂಭವಾಗಲಿರುವ ಈ ಪ್ರಯತ್ನದ ಉದ್ದೇಶ ಎಲೈಟ್ ವರ್ಲ್ಡ್ ರೆಕಾರ್ಡ್ಸ್ , ಏಷ್ಯನ್ ರೆಕಾರ್ಡ್ಸ್ ಅಕಾಡಮಿ , ಹಾಗು ಇಂಡಿಯಾ ರೆಕಾರ್ಡ್ಸ್ ಸೃಷ್ಟಿಸುವುದಾಗಿದೆ. ಇದು ಪೂರ್ಣ ಚೇತನ ವರ್ಲ್ಡ್ ರೆಕಾರ್ಡ್ಸ್ ಫೆಸ್ಟಿವಲ್ ನ ಮೊದಲನೇ ಪ್ರಯತ್ನವಾಗಿದ್ದು ಶನಿವಾರ ರಾತ್ರಿ 10.30ಕ್ಕೆ ಇದು ಮುಕ್ತಾಯಗೊಳ್ಳಲಿದೆ.
68 ವಿಶಿಷ್ಟ ರೊಬೊಟಿಕ್ ಮಾದರಿಗಳನ್ನು ಅವರು 16 ಗಂಟೆಗಳ ಅವಧಿಯಲ್ಲಿ ಸೃಷ್ಟಿಸಲಿದ್ದಾರೆ. ಈ ಯುವ ಬಾಲ ಪ್ರತಿಭೆಗಳು ಕೋಡಿಂಗ್, ರೊಬೋಟಿಕ್ ಹಾಗೂ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿಕೊಂಡು ಅತ್ಯಾಧುನಿಕ, ಸುಸ್ಥಿರ ಸ್ಮಾರ್ಟ್ ಹಳ್ಳಿಯ ಕಲ್ಪನೆಯನ್ನು ಸಾಕಾರಗೊಳಿಸಲಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ರೂಪಿಸುವ ಎಲ್ಲಾ ಪ್ರತಿಕೃತಿಗಳು ಕೆಲಸ ಮಾಡುವಂತಾಗಿದ್ದು, ಹಳ್ಳಿಗಳ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿವೆ. ವಿದ್ಯಾರ್ಥಿಗಳು ಹಳ್ಳಿಗಳ ಬದುಕನ್ನು ಇನ್ನಷ್ಟು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಇಂತಹ ಪ್ರಯತ್ನ ನಡೆಸಲಿದ್ದಾರೆ.
ಎಲೈಟ್ ವರ್ಲ್ಡ್ ರೆಕಾರ್ಡ್ಸ್ ನ ರಾಯಭಾರಿ ಹಾಗು ತೀರ್ಪುಗಾರರಾದ ಅಮೀತ್ ಕೆ ಹಿಂಗೋರಾಣಿ, ಡಾ. ಹನೀಫಾ ಬಾನು, ತೀರ್ಪುಗಾರರು , ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಡಾ. ಬಿ ಶಿವ ಕುಮಾರನ್, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿಯ ರಾಯಭಾರಿ ಮತ್ತು ಹಿರಿಯ ತೀರ್ಪುಗಾರರು, ಕೆ.ಆರ್. ವೆಂಕಟೇಶ್ವರನ್, ಇಂಡಿಯಾ ರೆಕಾರ್ಡ್ಸ್ ಅಕಾಡೆಮಿಯ ವ್ಯವಸ್ಥಾಪಕರು, ಡಾ. ಜಮುನಾ ರಾಜು, ಇಂಡಿಯಾ ರೆಕಾರ್ಡ್ಸ್ ಅಕಾಡೆಮಿಯ ರೆಕಾರ್ಡ್ಸ್ ವ್ಯವಸ್ಥಾಪಕರು ಮಕ್ಕಳ ಪ್ರತಿಕೃತಿಗಳನ್ನು ಪರಿಶೀಲಿಸಲಿದ್ದಾರೆ.
ಈ ಕನಸಿನ ಹಳ್ಳಿಯಲ್ಲಿ ಸ್ವಯಂ ಚಾಲಿತ ಬೀದಿ ದೀಪಗಳು, ಹೊಲಗಳಿಗೆ ಲೇಸರ್ ಭದ್ರತಾ ಕವಚ, ಹಳ್ಳಿ ಮನೆಗಳಲ್ಲಿ ಅಗ್ನಿ ಪತ್ತೆ ಹಚ್ಚುವಿಕೆ, ಕಮಾಂಡ್ ಕೊಟ್ಟರೆ ಉರಿಯುವ, ಆಫ್ ಆಗುವ ವಿದ್ಯುತ್ ದೀಪಗಳು ಸ್ಮಾರ್ಟ್ ವಿಲೇಜ್ ಮನೆಗಳ ವಿಶೇಷತೆಗಳಾಗಿವೆ.
Key words: Smart Village, students, dream, school, Mysore