For the best experience, open
https://m.justkannada.in
on your mobile browser.

 ʼ ವಾಸುಕಿʼ  ವೈಭವ :  ಅನಕೊಂಡಕ್ಕಿಂತ ಧೈತ್ಯವಾಗಿದ್ದ ಹಾವು ಪತ್ತೆ..!

02:00 PM Apr 22, 2024 IST | mahesh
 ʼ ವಾಸುಕಿʼ  ವೈಭವ    ಅನಕೊಂಡಕ್ಕಿಂತ ಧೈತ್ಯವಾಗಿದ್ದ ಹಾವು ಪತ್ತೆ

ಬೆಂಗಳೂರು, ಏ.22, 2024 : (www.justkannada.in news ) ಅಂದಾಜು, ಸುಮಾರು 4. 7 ಕೋಟಿ ವರ್ಷಗಳ ಹಿಂದೆ ಪ್ರಾಚೀನ ಭಾರತದಲ್ಲಿ ಧೈತ್ಯಗಾತ್ರದ ಸರ್ಪದ ಇರುವಿಕೆಗೆ ಪುರಾವೆ ಕಂಡು ಹಿಡಿದ ಸಂಶೋಧಕರು.

ಅಂದಿನ ಸರ್ಪಗಳ ರಾಜ ʼವಾಸುಕಿʼ ಯನ್ನು ಇಂದಿನ ಸಂಶೋಧಕರು ವಾಸುಕಿ ಇಂಡಿಕಸ್ ಎಂಬ (Vasuki Indicus) ಹೆಸರಿನ ಮೂಲಕ ಗುರುತಿಸಿ ನಿಬ್ಬೆರಗಾಗಿದ್ದಾರೆ.

ಈ ಹಾವಿನ ಮುಂದೆ ಹೆಬ್ಬಾವು, ಅನಕೊಂಡಗಳೇ  ಕುಬ್ಜ. ವಾಸುಕಿ ಇಂಡಿಕಸ್ ಇದುವರೆಗೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವುಗಳ ಪೈಕಿ ಒಂದು ಎನ್ನಲಾಗಿದೆ.

ʼನೇಚರ್ ʼ ಬ್ರಿಟಿಷ್ ವೈಜ್ಞಾನಿಕ ಜರ್ನಲ್‌ನಲ್ಲಿ ಇತ್ತೀಚಿಗೆ ಪ್ರಕಟಗೊಂಡ ಅಧ್ಯಯನ ವರದಿ ಈ ಬಗ್ಗೆ ಬೆಳಕು ಚೆಲ್ಲಿದೆ. ವರದಿ ಪ್ರಕಾರ,  ವಾಸುಕಿ ಹಾವು ನಿಧಾನವಾಗಿ ಚಲಿಸುವ, ಹೊಂಚು ದಾಳಿಯಿಂದ ಬೇಟೆಯಾಡುವ ಪರಭಕ್ಷಕ ಜೀವಿ.

ಸಂರಕ್ಷಿತ ಕಶೇರುಖಂಡಗಳ ಗಾತ್ರವನ್ನು ಆಧರಿಸಿ, ಹಾವು 10.9 ಮೀಟರ್ (36 ಅಡಿ) ನಿಂದ 15.2 ಮೀಟರ್ (50 ಅಡಿ) ಉದ್ದವಿತ್ತು. ಎರಡು ವಿಭಿನ್ನ ಲೆಕ್ಕಾಚಾರದ ವಿಧಾನಗಳ ಆಧಾರದ ಮೇಲೆ ವಿಶಾಲ ಮತ್ತು ಸಿಲಿಂಡರಾಕಾರದ ದೇಹವನ್ನು ಹೊಂದಿತ್ತು ಎಂಬುದು ಸಂಶೋಧಕರು ಅಭಿಪ್ರಾಯ.

 ವಾಸುಕಿ ಇಂಡಿಕಸ್ ಅನಕೊಂಡಗಳಂತೆಯೇ ನೀರಿನಲ್ಲಿ ವಾಸಿಸುವುದಕ್ಕಿಂತ ಹೆಚ್ಚಾಗಿ ಭೂಮಿಯಲ್ಲಿ ವಾಸಿಸಿರಬಹುದು. ಆದರೆ ಅದರ ಗಾತ್ರದ ಕಾರಣದಿಂದ ಬಹುಶಃ ಮರಗಳನ್ನು ಹತ್ತಲು ಸಾಧ್ಯವಿರಲಿಲ್ಲ ಎಂಬುದು ಅಧ್ಯಯನಗಳ ವರದಿ. ಇದು ಸದ್ಯ ಪತ್ತೆಯಾದ ಅತಿದೊಡ್ಡ ಹಾವಿನ ಜಾತಿಯಾಗಿದೆ.

key words : snake, Vasuki indicus, found, million years ago. Vasuki Indicus.

Tags :

.