ಸ್ನೇಹಮಯಿ ಕೃಷ್ಣ ರೌಡಿಶೀಟರ್: ಸಿಎಂ ಕೇಸ್ ನಲ್ಲಿ ಅವರ ಕಡೆಯವರು 100 ಕೋಟಿ ಡೀಲ್ ಗೆ ಬಂದಿದ್ರು -ಎಂ.ಲಕ್ಷ್ಮಣ್
ಮೈಸೂರು,ಆಗಸ್ಟ್,28,2024 (www.justkannada.in): ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ತಮ್ಮ ವಿರುದ್ದ ದೂರು ದಾಖಲು ಮಾಡಿದ ಆರ್ ಟಿಐ ಕಾರ್ಯಕರ್ತ ಸ್ನೇಹಮಯಿಕೃಷ್ಣ ವಿರುದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ನೇಹಮಯಿಕೃಷ್ಣ ಹಿನ್ನೆಲೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಎಂ. ಲಕ್ಷ್ಮಣ್, ಸ್ನೇಹಮಯಿ ಕೃಷ್ಣ ಒಬ್ಬ ಬ್ಲಾಕ್ ಮೇಲರ್ , ರೌಡಿಶೀಟರ್. ಸ್ನೇಹಮಯಿ ಕೃಷ್ಣ ಅವರನ್ನು ಅಡ್ಜಸ್ಟ್ ಮಾಡಿಕೊಳ್ಳಿ ಸರ್ ಅಂತ ಮೆಸೇಜ್ ಮಾಡಿದ್ದರು. ಆ ವ್ಯಕ್ತಿ ಯಾರು ಅಂತ ನಾನು ಹೇಳಲ್ಲ 100 ಕೋಟಿ ಕೊಡಿ ಅಂದರು. ನಾನು ತಪ್ಪೇ ಇಲ್ಲದೇ ನಾವು ಯಾಕೆ ಹಣ ಕೊಡಬೇಕು ಅಂತ ಹೇಳಿದವು. ಈ ಮಾತು ಯಾರು ಹೇಳಿದ್ರು ಅಂತ ನಾನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಸಿಎಂ ಕೇಸ್ ನಲ್ಲಿ 100 ಕೋಟಿ ಡೀಲ್ ಗೆ ಬಂದಿದ್ದರು. ಸ್ನೇಹಮಯಿ ಕೃಷ್ಣ ಕಡೆಯವರು ನನ್ನ ಹತ್ತಿರ ಬಂದಿದ್ದರು ಎಂದು ಗಂಭೀರ ಆರೋಪ ಮಾಡಿದರು.
ಈ ಹಿಂದೆಯೂ ಇಂತಹ ಅನೇಕ ಕೇಸ್ ಗಳನ್ನು ಇದೇ ರೀತಿ ಮಾಡಿದ್ದಾನೆ ಈ ಬಗ್ಗೆ ದಾಖಲೆ ಇಲ್ಲ, ಇನ್ನೂ ದೂರು ಕೂಡ ಕೊಟ್ಟಿಲ್ಲ ಮುಂದಿನ ದಿನ ಅದೇ ವ್ಯಕ್ತಿಯನ್ನು ಕರೆದುಕೊಂಡು ಬಂದು ಸುದ್ದಿಗೋಷ್ಠಿ ಮಾಡಿಸುತ್ತೇನೆ ಎಂದು ಎಂ. ಲಕ್ಷ್ಮಣ್ ತಿಳಿಸಿದರು.
ಸ್ನೇಹಮಯಿ ಕೃಷ್ಣ ವಿರುದ್ದ44 ಪ್ರಕರಣಗಳು
ಸ್ನೇಹಮಹಿಕೃಷ್ಣ ವಿರುದ್ದವೇ ರಾಜ್ಯದಾದ್ಯಂತ 44 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೈಸೂರಿನಲ್ಲೇ 17 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಮೈಸೂರಿನ ಕೆ ಆರ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಹಾಕಲಾಗಿದೆ. ಈಗಲೂ ರೌಡಿಶೀಟರ್ ಆಗಿದ್ದಾರೆ. ಸ್ನೇಹಮಯಿ ಕೃಷ್ಣ ವಿರುದ್ದ ಕೊಲೆ, ಬ್ಲಾಕ್ ಮೇಲ್, ಬೆದರಿಕೆ ಸೇರಿದಂತೆ ಇನ್ನಿತರ ಆರೋಪಗಳಡಿ ಪ್ರಕರಣಗಳು ದಾಖಲಾಗಿವೆ. ಸ್ನೇಹಮಯಿಕೃಷ್ಣ ಮನೆ ರೈಡ್ ಮಾಡಿದರೆ ಮುಡಾಗೆ ಸಂಬಂಧಿಸಿದ ದಾಖಲೆಗಳು ಸಿಗುತ್ತವೆ ಎಂದು ಎಂ.ಲಕ್ಷ್ಮಣ್ ಹೇಳಿದರು.
ನಾವು ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸುವುದಿಲ್ಲ. ನಮ್ಮ ಪಕ್ಷದ ಸರ್ಕಾರ ಇದ್ದರೂ ನಮ್ಮ ದೂರು ಸ್ವೀಕರಿಸುತ್ತಿಲ್ಲ. ಆದರೆ ನಮ್ಮ ವಿರುದ್ಧ ಸ್ನೇಹಮಹಿಕೃಷ್ಣ ನೀಡುವ ದೂರನ್ನು ಪೊಲೀಸರು ಸ್ವೀಕರಿಸುತ್ತಿದ್ದಾರೆ. ಸ್ನೇಹಮಹಿಕೃಷ್ಣ ಎಷ್ಟೊಂದು ಪ್ರಭಾವಿ ಎಂಬುದು ಇದರಿಂದ ಸಾಬೀತಾಗಿದೆ ಎಂದು ಕಿಡಿಕಾರಿದರು.
Key words: Snehamai Krishna, rowdy sheeter, KPCC, Spokesperson, M. Laxman