For the best experience, open
https://m.justkannada.in
on your mobile browser.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ: 131 ಕೋಟಿ ಹಣ ಮೀಸಲು-ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್.

01:05 PM Feb 24, 2024 IST | prashanth
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ  131 ಕೋಟಿ ಹಣ ಮೀಸಲು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು,ಫೆಬ್ರವರಿ,24,2024(www.justkannada.in): ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಇದಕ್ಕಾಗಿ 131 ಕೋಟಿ ಹಣ ಮೀಸಲಿಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕುರಿತು ಸಭೆ ನಡೆಸಿ ಚರ್ಚಿಸಿದ ಬಳಿಕ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್,  ನೀರಿನ ಸಮಸ್ಯೆ ನೀಗಿಸಲು ನಾವು ಮತ್ತು BWSSB  ಬೋರ್ ವೆಲ್ ಕೊರೆಸುತ್ತೇವೆ. ಪ್ರತಿಕ್ಷೇತ್ರಕ್ಕೆ 10 ಕೋಟಿ ರೂ. ಹಣವನ್ನ  BWSSBಗೆ ನೀಡುತ್ತೇವೆ ಎಂದರು.

ಖಾಸಗಿ ಟ್ಯಾಂಕರ್ ಗಳನ್ನ ದುಡ್ಡು ಕೊಟ್ಟು ಖರೀದಿಸುತ್ತೇವೆ. ಈಗಾಗಲೇ 200 ಟ್ಯಾಂಕರ್ ಖರೀದಿಸಿದ್ದೇವೆ  110 ಹಳ್ಳಿಗಳಿಗೆ 40 ಸಾವಿರ ಕನೆಕ್ಷನ್ ಕೊಟ್ಟಿದ್ದೇವೆ.  110 ಹಳ್ಳಿಗಳಲ್ಲಿ ನೀರಿನ ನಿರ್ವಹಣೆ ಬಿಬಿಎಂಪಿ ಮಾಡುತ್ತದೆ.  BWSSB ನಗರ ವ್ಯಾಪ್ತಿಯಲ್ಲಿ ನಿರ್ವಹಣೆ ಮಾಡುತ್ತದೆ ಎಂದರು.

ಖಾಸಗಿ ನೀರಿನ ಟ್ಯಾಂಕರ್ ಗಳಿಗೆ ಯಾವುದೇ ದರ ನಿಗದಿ ಮಾಡಿಲ್ಲ. ನಾವೇ ಖಾಸಗಿ ನೀರಿನ ಟ್ಯಾಂಕರ್ ತೆಗೆದುಕೊಳ್ಳುತ್ತೇವೆ. ಆ ದರವನ್ನ ನಾವು ಕೊಡುತ್ತೇವೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

Key words: solve -water problem – Bengaluru- 131 crore- money - BBMP Commissioner -Tushar Girinath.

Tags :

.