For the best experience, open
https://m.justkannada.in
on your mobile browser.

ಅತಿ ಹೆಚ್ಚು ಮತಗಳ ಅಂತರದಿಂದ ‘ಕೈ’ ಅಭ್ಯರ್ಥಿ ಮರಿತಿಬ್ಬೇಗೌಡರ ಗೆಲುವು ನಿಶ್ಚಿತ-ಹೆಚ್.ಎ ವೆಂಕಟೇಶ್ ವಿಶ್ವಾಸ.

03:38 PM May 29, 2024 IST | prashanth
ಅತಿ ಹೆಚ್ಚು ಮತಗಳ ಅಂತರದಿಂದ ‘ಕೈ’ ಅಭ್ಯರ್ಥಿ ಮರಿತಿಬ್ಬೇಗೌಡರ ಗೆಲುವು ನಿಶ್ಚಿತ ಹೆಚ್ ಎ ವೆಂಕಟೇಶ್ ವಿಶ್ವಾಸ

ಮಂಡ್ಯ ,ಮೇ,29,2024 (www.justkannada.in):  ವಿಧಾನ ಪರಿಷತ್ ಚುನಾವಣೆ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಜೆಡಿಎಸ್ ವಿಫಲವಾಗಿದೆ.  ಹೀಗಾಗಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದು  ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಎ ವೆಂಕಟೇಶ್,  ಮರಿತಿಬ್ಬೇಗೌಡ ಅವರ ಸಾಮರ್ಥ್ಯ ನೋಡಿ ಅವರನ್ನ ಅಭ್ಯರ್ಥಿಯನ್ನಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಐದು ಗ್ಯಾರಂಟಿಗಳನ್ನ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿ ಮಾಡಿದೆ.  ಬಡವರನ್ನ ಬಡತನ ರೇಖೆಯಿಂದ ಮೇಲೆತ್ತಲು ಗ್ಯಾರಂಟಿ ಜಾರಿ ಮಾಡಿದ್ದಾರೆ.   ಕರ್ನಾಟಕದಲ್ಲಿ ಗ್ಯಾರಂಟಿ ಕೊಡುವುದಕ್ಕೂ ಮುನ್ನ ದೇಶದಲ್ಲಿ ಗ್ಯಾರಂಟಿ ಎಲ್ಲೂ ಇರಲಿಲ್ಲ. ಗ್ಯಾರಂಟಿ ಅನ್ನೋ ಪದ ಬಂದಿದ್ದೇ ಕರ್ನಾಟಕದಿಂದ ಅದರ ಮೌಲ್ಯಮಾಪನವನ್ನ ಜನರು ಮಾಡುತ್ತಾರೆ. 10 ವರ್ಷಗಳ ಮೋದಿ ಆಡಳಿತವನ್ನೂ ಸಹ ಮೌಲ್ಯಮಾಪನ ಮಾಡುವ ಜವಾಬ್ದಾರಿ ಜನರಲ್ಲಿದೆ. ಮೋದಿ ಅವರ ವೈಪಲ್ಯವನ್ನೂ ಸಹ ಈ ಚುನಾವಣೆಯಲ್ಲಿ ಜನರು ಅಳೆಯಬೇಕು. ಅದು ಅವರ ಕರ್ತವ್ಯ ಕೂಡ ಎಂದರು.

ಇಡೀ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನ ಜೆಡಿಎಸ್ ಮತ್ತು ಬಿಜೆಪಿ ಅಪವಿತ್ರಗೊಳಿಸಿದೆ.

ಇಡೀ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನ ಜೆಡಿಎಸ್ ಮತ್ತು ಬಿಜೆಪಿ ಅಪವಿತ್ರಗೊಳಿಸಿದೆ. ಜೆಡಿಎಸ್ ಅಭ್ಯರ್ಥಿ ಆಯ್ಕೆಯಲ್ಲಿ ಎನ್ ಡಿಎ ವಿಫಲವಾಗಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರ ಸುಶಿಕ್ಷಿತ ಕ್ಷೇತ್ರ.  ಹೀಗಾಗಿ ಅಭ್ಯರ್ಥಿಯನ್ನ ಆಳತೆ ಮಾಡಲು ಆಳತೆಗೋಲು ಇರಬೇಕು. ಆದರೆ ಅವರಿಗೆ ಯಾವುದೇ ಅಳತೆಗೋಲು ಇಲ್ಲ. ಜೆಡಿಎಸ್ ನವರೇ ಹೇಳುತ್ತಿದ್ದರು ಶಿಕ್ಷಕರ ಕ್ಷೇತ್ರವನ್ನ ಸುಶಿಕ್ಷಿತರ ಕ್ಷೇತ್ರ ಎಂದು.  ಆದರೆ ಅಭ್ಯರ್ಥಿಯಾಗಿ ಯಾರನ್ನ ಆಯ್ಕೆ ಮಾಡಿದ್ದಾರೆ..? ಸಾ. ರಾ ಮಹೇಶ್ ಅವರೇ ಹೇಳಿದ್ದಾರೆ ನಮ್ಮ ಅಭ್ಯರ್ಥಿ ವಾಗ್ಮಿ ಅಲ್ಲ ಎಂದು. ವಿಧಾನಪರಷತ್ ಗೆ ಬೇಕಾಗಿರುವವರು ವಾಗ್ಮಿಗಳು ತಿಳುವಳಿಕೆ ಇರುವವರು ಎಂದು ಹೆಚ್.ಎ ವೆಂಕಟೇಶ್ ಟಾಂಗ್ ಕೊಟ್ಟರು.

ಮೊದಲು ಬಿಜೆಪಿಯು ಅಭ್ಯರ್ಥಿಯನ್ನ ಆಯ್ಕೆ ಮಾಡಿ ನಂತರ ನಾಮಿನೇಷನ್ ಹಾಕಬೇಡ ಎನ್ನುತ್ತಾರೆ ಇದು ಬಿಜೆಪಿ ರಾಜಕೀಯದ ದಿವಾಳಿತನವಾಗಿದೆ ಎಂದು ಲೇವಡಿ ಮಾಡಿದರು.

ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ಏನು ಇಲ್ಲ ಎಂದು ಆರೋಪಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಸುಧಾರಣೆ ಆಗಿರುವುದೇ ಕಾಂಗ್ರೆಸ್ ಕಾಲದಲ್ಲಿ.  ಬಿಜೆಪಿ ಕಾಲದಲ್ಲಿ 7 ವಿವಿಗಳನ್ನ ಪ್ರಾರಂಭ ಮಾಡಿದರು. 7 ಕುಲಪತಿಗಳನ್ನ ಆಯ್ಕೆ ಮಾಡಿದ್ದರು ಹೊರತು ಶಿಕ್ಷಕರನ್ನ ನೇಮಕ ಮಾಡಲಿಲ್ಲ.ಸುಮ್ಮನೇ ವಿವಿ ಸ್ಥಾಪನೆ ಮಾಡಿದ್ರು. ಈಗ ನಮ್ಮ ಸರ್ಕಾರ  ಕಳೆದ ಒಂದು ವರ್ಷದಲ್ಲಿ 1242 ಸಹಪ್ರಾಧ್ಯಾಪಕರ ನೇಮಕಕ್ಕೆ ಮುಂದಾಗಿ ಇದೀಗ ಪಟ್ಟಿ ರೆಡಿ ಇದೆ.  ಉನ್ನತ ಶಿಕ್ಷಣ ಸಚಿವರು 10 ದೊಡ್ಡ ಕಂಪನಿಗಳಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದಾರೆ.  ಕೌಶಲ್ಯ ಶಿಕ್ಷಣಕ್ಕೆ ಸರಕಾರ ಒತ್ತು ನೀಡುತ್ತಿದೆ.  ಎಸ್. ಎಂ ಕೃಷ್ಣ  ಅವರ ಕಾಲದಲ್ಲೂ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಶಿಕ್ಷಣ ಇಲಾಖೆಯನ್ನ ಶೋಷಣೆಗೆ ನೂಕಿದ್ದು ಜನತಾ ಪಕ್ಷ.  ಶಿಕ್ಷಣ ಇಲಾಖೆಯಲ್ಲಿ ಬಿಜೆಪಿ ಅವಧಿಯಲ್ಲಿ ನೇಮಕಾತಿ ಎಷ್ಟಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ನೇಮಕಾತಿ ಆಗಿದೆ  ಎಂಬುದರ ಬಗ್ಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಉತ್ತಮ ಅಭ್ಯರ್ಥಿಯನ್ನ ಕಾಂಗ್ರೆಸ್ ಆಯ್ಕೆ ಮಾಡಿದೆ. ಮರಿತಿಬ್ಬೇಗೌಡರು  4ನೇ ಬಾರಿ ಆಯ್ಕೆಯಾಗಿದ್ರು. ಈ ಬಾರಿಯೂ ಅತಿಹೆಚ್ಚು ಮತಗಳಿಂದ ಗೆಲ್ಲುತ್ತಾರೆ . ಈ ಬಾರಿ ಕರ್ನಾಟಕದ 6 ಕ್ಷೇತ್ರಗಳಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೆಚ್.ಎ ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು.

Key words: Southern, Teachers, Constituency, congress,  H.A Venkatesh

Tags :

.