For the best experience, open
https://m.justkannada.in
on your mobile browser.

170ಕ್ಕೂ ಹೆಚ್ಚು ಪೌರ ಕಾರ್ಮಿಕರ ವಿಶೇಷ ನೇರ ನೇಮಕಾತಿ: ಆದೇಶ ಪತ್ರ ವಿತರಿಸಿದ ಸಚಿವ ಹೆಚ್. ಸಿ ಮಹದೇವಪ್ಪ.

03:07 PM Feb 09, 2024 IST | prashanth
170ಕ್ಕೂ ಹೆಚ್ಚು ಪೌರ ಕಾರ್ಮಿಕರ ವಿಶೇಷ ನೇರ ನೇಮಕಾತಿ  ಆದೇಶ ಪತ್ರ ವಿತರಿಸಿದ ಸಚಿವ ಹೆಚ್  ಸಿ ಮಹದೇವಪ್ಪ

ಮೈಸೂರು,ಫೆಬ್ರವರಿ,9,2024(www.justkannada.in): ಮೈಸೂರು ಮಹಾ ನಗರ ಪಾಲಿಕೆ ವತಿಯಿಂದ ಪೌರ ಕಾರ್ಮಿಕರ ವಿಶೇಷ ನೇರ ನೇಮಕಾತಿ ಮಾಡಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಆದೇಶ ಪತ್ರ ವಿತರಿಸಿದರು.

ಆದೇಶ ಪತ್ರ ವಿತರಣಾ ಕಾರ್ಯಕ್ರಮ ಇಂದು ಆಯೋಜನೆ ಮಾಡಲಾಗಿತ್ತು.  ಆಯ್ಕೆಯಾಗಿರುವ 170 ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ  ನೇರ ನೇಮಕಾತಿ ಆದೇಶದ ಪತ್ರವನ್ನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ವಿತರಿಸಿದರು.

ಮೊದಲು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ನಂತರ ವೇದಿಕೆಯಲ್ಲಿ ಸಾಂಕೇತಿಕವಾಗಿ ಹತ್ತು ಜನರಿಗೆ ಆದೇಶ ಪ್ರತಿ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಹರೀಶ್ ಗೌಡ, ತನ್ವೀರ್ ಸೇಠ್, ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಮರಿತಿಬ್ಬೇಗೌಡ, ಮಂಜೇಗೌಡ, ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಪೌರ ಕಾರ್ಮಿಕರ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸಾಮಾಜಿಕ ಅಸಮಾನತೆ ಹೋಗಲಾಡಿಸಲಿಕ್ಕೆ ಸಂವಿಧಾನ ಇರುವುದು. ನಮ್ಮ‌ ಸರ್ಕಾರದ ಯಾವಾಗಲೂ ದೀನ‌ ದಲಿತರ ಪರವಾಗಿದೆ. ಸಂವಿಧಾನದ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಈಗ ಸುಮಾರು 170 ಜನರಿಗೆ ಖಾಯಂ ಉದ್ಯೋಗ ಕೊಟ್ಟು ಕಟ್ಟ ಕಡೆಯ ಮನುಷ್ಯನಿಗೆ ಮೊಟ್ಟ ಮೊದಲ ಆದ್ಯತೆ ಕೊಟ್ಟು ಗಾಂಧಿಜೀ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ನಿಮ್ಮ‌ ಬಾಳು ಮುಂದಿನ ದಿನಗಳಲ್ಲಿ ಹಸನಾಗಲಿ ಎಂದು ಪೌರ ಕಾರ್ಮಿಕರಿಗೆ ಶುಭ ಕೋರಿದರು.

Key words: Special -direct -recruitment - civic workers- Minister H. C Mahadevappa -recruitment order

Tags :

.