ಶ್ರೀರಾಂಪುರ ಪ.ಪಂಚಾಯಿತಿಯಲ್ಲಿ ಹಣ ದುರ್ಬಳಕೆ ಕೇಸ್: ಕರ್ತವ್ಯದಿಂದ ಕಂಪ್ಯೂಟರ್ ಆಪರೇಟರ್ ಬಿಡುಗಡೆ.
ಮೈಸೂರು,ಜೂನ್,14,2024 (www.justkannada.in): ಸಾರ್ವಜನಿಕರು ಸಂದಾಯಿಸಲು ಬಂದ ತೆರಿಗೆ ಹಣವನ್ನ ತನ್ನ ಸ್ವಂತ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ವಂಚನೆ, ಹಣ ದುರ್ಬಳಕೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ನಮ್ರತಾ ಅವರನ್ನ ಕಚೇರಿಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹಣ ದುರ್ಬಳಕೆ ಆರೋಪ ಸಂಬಂಧ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಕಂಪ್ಯೂಟರ್ ಅಪರೇಟರ್ (ದಿನಗೂಲಿ ನೌಕರರು) ನಮ್ರತ ಎಂ. ವಿ ವಿರುದ್ದ ದೂರು ದಾಖಲಾಗಿತ್ತು . ಈ ಸಂಬಂಧ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸುರೇಶ್ ಎಂ.ಕೆ ಅವರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಶ್ರೀರಾಂಪುರ ಪಟ್ಟಣ ಪಂಚಾಯಿತಿಯಲ್ಲಿ ನಮ್ರತ, ಎಂ. ವಿ ಕಛೇರಿಯ ಟೈಪಿಂಗ್ ಕೆಲಸದ ಜೊತೆಗೆ ಸಾರ್ವಜನಿಕರ ತೆರಿಗೆ ಹಣವನ್ನು ಇ-ಸ್ಟೀಕೃತಿ (ಚಲನ್) ಪದ್ಧತಿಯಲ್ಲಿ ಸೃಜಿಸುವ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಇವರ ಮೇಲೆ ತೆರಿಗೆ ಹಣವನ್ನು ಅವರ ಸ್ವಂತ ಬ್ಯಾಂಕ್ ಖಾತೆಗೆ ಸಾರ್ವಜನಿಕರಿಂದ ಹಣವನ್ನು ಜಮೆ ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿತ್ತು.
ಈ ಕುರಿತಾಗಿ ದಿನಾಂಕ: 13-05- 2024 ರಂದು ವಿಶ್ವನಾಥ್ ಖಿಣಿ ಜಯನಗರ, ಮೈಸೂರು ಇವರು ತಮ್ಮ ಸ್ವತ್ತುಗಳಿಗೆ ತೆರಿಗೆ ಸಂದಾಯಿಸಲು ಕಛೇರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಪರಿಶೀಲಿಸಲಾಗಿ 2023- 24ನೇ ಸಾಲಿನ ಕಂದಾಯ ಬಾಕಿ ಇರುವುದಾಗಿ ಸದರಿಯವರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ವಿಶ್ವನಾಥ್ ಖಿಣಿ 2023-34ನೇ ಸಾಲಿನಲ್ಲಿ ಅವರಿಗೆ ಸಂಬಂಧಪಟ್ಟ ಸ್ಪತ್ತುಗೆ ಸೇರಿ 47900/-ರೂ. ಗಳನ್ನು ತೆರಿಗೆ ಸಂದಾಯಿಸಲು ಕಳೆದ ವರ್ಷ ನಮ್ರತ ಎಂ. ವಿ. ಅವರಲ್ಲಿ ಚರ್ಚಿಸಿದಂತೆ ನಮ್ರತ ರವರು ಸ್ವಂತ ಬ್ಯಾಂಕ್ ಖಾತೆಯ ವಿವರವನ್ನು ನೀಡಿದ್ದು, ಇದಕ್ಕೆ ವಿಶ್ವನಾಥ್. ಖಿಣಿಯವರು 47900/-ರೂಗಳನ್ನು ಸಂದಾಯಿಸಿರುವುದು ಬೆಳಕಿಗೆ ಬಂದಿತು. ಈ ಬಗ್ಗೆ 13. 05. 2024ರಂದು ನಮ್ರತ ಎಂ. ವಿ. ಅವರ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದರು.
ನಮ್ರತ ಎಂ. ವಿ. ಕಂಪ್ಯೂಟರ್ ಅಪರೇಟರ್ (ದಿನಗೂಲಿ ನೌಕರರು) ಇವರಿಂದ ಸಾರ್ವಜನಿಕರಿಗೆ ವಂಚನೆ ಮತ್ತು ಸರ್ಕಾರಕ್ಕೆ ಬರಬೇಕಾದ ಆರ್ಥಿಕ ನಷ್ಟ ಆಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸುರೇಶ್ ಎಂ.ಕೆ ಅವರು ದೂರು ವಿದ್ಯರಣ್ಯಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ನಮ್ರತಾ ಅವರನ್ನ ಕಚೇರಿಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ.
Key words: Srirampur, Panchayat, computer operator, released, duty