For the best experience, open
https://m.justkannada.in
on your mobile browser.

SSLC Result: ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ 2ನೇ ಟಾಪರ್ ಆದ ಮೈಸೂರಿನ ವಿದ್ಯಾರ್ಥಿನಿ.

06:06 PM Jun 05, 2024 IST | prashanth
sslc result  ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ 2ನೇ ಟಾಪರ್ ಆದ ಮೈಸೂರಿನ ವಿದ್ಯಾರ್ಥಿನಿ

ಮೈಸೂರು,ಜೂನ್,5,2024 (www.justkannada.in): 2024ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ, ಮರು ಮೌಲ್ಯಮಾಪನದ ನಂತರ ಮೈಸೂರಿನ ವಿದ್ಯಾರ್ಥಿನಿ ಸುದೀಕ್ಷ ಎಂ. ಡಿ ರಾಜ್ಯಕ್ಕೆ ಎರಡನೇ ಟಾಪರ್ ಆಗಿದ್ದಾರೆ.

ಮೈಸೂರಿನ ವಿಜಯ ವಿಠ್ಠಲ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಸುದೀಕ್ಷ ಎಂ. ಡಿಗೆ  ಮೌಲ್ಯಮಾಪಕರ ಎಡವಟ್ಟಿನಿಂದ 620 ಅಂಕ ನೀಡಲಾಗಿತ್ತು.  ಮೊದಲ ಫಲಿತಾಂಶದಲ್ಲಿ ಮೈಸೂರಿನ ಸುದೀಕ್ಷಗೆ 625ಕ್ಕೆ 620 ಅಂಕ ನೀಡಲಾಗಿತ್ತು.  ಕನ್ನಡ ಸೇರಿ 5 ವಿಷಯದಲ್ಲಿ ಶೇ 100ರಷ್ಟು ಅಂಕ ಗಳಿಸಿದ್ದರು. ಸಂಸ್ಕೃತ 125 ಇಂಗ್ಲಿಷ್ 100 ಕನ್ನಡ 100 ವಿಜ್ಞಾನ 100 ಸಮಾಜ 100 ಗಣಿತದಲ್ಲಿ 95 ಅಂಕ ಬಂದಿತ್ತು.

ನಂತರ ಮರುಮೌಲ್ಯ ಮಾಪನಕ್ಕೆ‌ ಮನವಿ ಸಲ್ಲಿಸಲಾಗಿತ್ತು ಇಂದು ಮರು ಮೌಲ್ಯ ಮಾಪನದ ಫಲಿತಾಂಶ ಪ್ರಕಟವಾಗಿದ್ದು,  ಮರು ಮೌಲ್ಯ ಮಾಪನದಲ್ಲಿ ಗಣಿತದಲ್ಲಿ 99 ಅಂಕ ಗಳಿಸಿದ್ದು, ಇದರಿಂದಾಗಿ ಇದೀಗ 625ಕ್ಕೆ 624 ಅಂಕ ಲಭಿಸಿದೆ. ಈ ಮೂಲಕ ಸುಧೀಕ್ಷ ಮೈಸೂರು ಜಿಲ್ಲೆಗೆ ಟಾಪರ್ ಹಾಗೂ ರಾಜ್ಯಕ್ಕೆ ಎರಡನೇ ಸ್ಥಾನ‌ ಪಡೆದಿದ್ದಾರೆ.

Key words: SSLC –Result- 2nd topper - state - re-evaluation –Mysore- student

Tags :

.