HomeBreaking NewsLatest NewsPoliticsSportsCrimeCinema

ಮೈಸೂರು : ಎಸ್.ಎಸ್.ಎಲ್.ಸಿ ಪರೀಕ್ಷೆ ಹೊಸ ಪ್ರಯೋಗಕ್ಕೆ ಫಲ, ಉತ್ತಮ ಫಲಿತಾಂಶ

05:10 PM May 09, 2024 IST | mahesh
ಹೊಸ ಪ್ರಯೋಗಕ್ಕೆ ನಾಂದಿಯಾಡಿದ ಬಿಇಒ ರಾಜು ಅವರಿಗೆ ಆತ್ಮೀಯ ಅಭಿನಂಧನೆ

ಮೈಸೂರು, ಮೇ,09, 2024 : (www.justkannada.in news ) ಕಳೆದ ಬಾರಿಗಿಂತ ಈ ಭಾರಿ ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಫಲಿತಾಂಶ ಬಂದಿದೆ. ಫಲಿತಾಂಶ ಹೆಚ್ಚಾಗಲಿಕ್ಕೆ ಎಲ್ಲರು ಸಹಕಾರ ನೀಡಿದ್ದಾರೆ ಎಂದು ಮೈಸೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಅಭಿಪ್ರಾಯ.

ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ ಬಿಇಒ ರಾಜು ಅವರು ಹೇಳಿದಿಷ್ಟು..

ಮಕ್ಕಳಿಗೆ ಪ್ರೋತ್ಸಾಹ ತುಂಬಬೇಕು. ಫಲಿತಾಂಶ ಹೆಚ್ಚಳ ಮಾಡಬೇಕೆಂದು ಕೆಲವೊಂದು ಯೋಜನೆಗಳನ್ನ ಹಾಕಿಕೊಂಡಿದ್ದೆವು. ಬೆಳಗ್ಗೆ ಮತ್ತು ಸಂಜೆ ನಾವೇ ವಿದ್ಯಾರ್ಥಿಗಳ ಮನೆಗೆ ತೆರಳಿ ವಿದ್ಯಾರ್ಥಿಗಳನ್ನ ಓದಿಸಲು ಪ್ರಾರಂಭ ಮಾಡಿದೆವು. ಮೊದಲಿಗೆ ನಮಗೆ ಇದು ಚಾಲೆಂಜಿಂಗ್ ಆಗಿತ್ತು. ವಿದ್ಯಾರ್ಥಿಗಳು, ಪೋಷಕರು ಕೂಡ ನಿರ್ಲಕ್ಷ ಮಾಡುತ್ತಿದ್ರು. ನಂತರ ನಾವು ಮನವರಿಕೆ ಮಾಡಿದ ನಂತರ ಒಳ್ಳೆಯ ವಾತಾವರಣ ಸೃಷ್ಟಿಯಾಯಿತು.

 

 

ಈ ಹಿಂದೆ ನಂಜನಗೂಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೂ ಈ ರೀತಿಯಾದ ಪ್ರಯೋಗ ಮಾಡಿದ್ದೆವು. ಅದೇ ರೀತಿ ಇಲ್ಲೂ ಸಹ ಪ್ರಯೋಗ ಮಾಡಿದೆವು.. ಡಿಡಿಪಿಐ ಪಾಂಡು, ನಮ್ಮ ಅಧಿಕಾರಿಗಳು, ಶಿಕ್ಷಕರು ಎಲ್ಲರು ನಮಗೆ ಕೈ ಜೋಡಿಸಿದ್ರು.

ಈಗ ದಕ್ಷಿಣ ವಲಯದಲ್ಲಿ ಹೆಚ್ಚಿನ ಫಲಿತಾಂಶ ಬಂದಿದೆ. ಇದು ನಮ್ಮ ಪರಿಶ್ರಮಕ್ಕೆ ಸಿಕ್ಕ ಪ್ರತಿ ಫಲವಾಗಿದೆ. ಮೈಸೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎನ್ ರಾಜು ಹೇಳಿಕೆ.

key words : SSLC, result, mysore, beo

Mysuru:  SSLC examination results for a new experiment, good results

summary :

ಹೊಸ ಪ್ರಯೋಗಕ್ಕೆ ನಾಂದಿಯಾಡಿದ ಬಿಇಒ ರಾಜು ಅವರಿಗೆ ಆತ್ಮೀಯ ಅಭಿನಂಧನೆ

Children should be encouraged. We had some plans to increase the results. In the morning and evening, we went to the students' homes and started reading the students. At first it was challenging for us. Students and parents were also ignoring it. Then a good atmosphere was created after we were convinced.

 

 

Tags :
BEOMysore.resultSSLC
Next Article