For the best experience, open
https://m.justkannada.in
on your mobile browser.

ಎಸ್ ಎಸ್ ಎಲ್ ಸಿ ಫಲಿತಾಂಶ:  ಭಾರೀ ಜಿಗಿತ ಕಂಡ ಮೈಸೂರು ಜಿಲ್ಲೆ.

01:18 PM May 09, 2024 IST | prashanth
ಎಸ್ ಎಸ್ ಎಲ್ ಸಿ ಫಲಿತಾಂಶ   ಭಾರೀ ಜಿಗಿತ ಕಂಡ ಮೈಸೂರು ಜಿಲ್ಲೆ

ಮೈಸೂರು ,ಮೇ,9,2024 (www.justkannada.in):  2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.  ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಈ ಮಧ್ಯೆ ಮೈಸೂರು ಜಿಲ್ಲೆ ಈ ಸಲ ಫಲಿತಾಂಶದಲ್ಲಿ  ಭಾರೀ  ಜಿಗಿತ ಕಂಡಿದೆ.

ಕಳೆದ ಬಾರಿ ಫಲಿತಾಂಶದಲ್ಲಿ 19ನೇ ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆ ಈ ಬಾರಿ 7ನೇ ಸ್ಥಾನಕ್ಕೆ ಜಿಗಿದಿದ್ದು ಈ ಮೂಲಕ 12 ಸ್ಥಾನ ಮೇಲೇರಿ 7ನೇ ಸ್ಥಾನ  ಪಡೆದುಕೊಂಡಿದೆ.

ಮೈಸೂರು ಜಿಲ್ಲೆಯಾದ್ಯಂತ ಒಟ್ಟು 38,175 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 32,639 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಒಟ್ಟಾರೆಯಾಗಿ 85.5% ಫಲಿತಾಂಶ ಬಂದಿದೆ.  ಸಾರ್ವಜನಿಕ ಶಿಕ್ಷಣ ಇಲಾಖೆಯ  ಜಿಲ್ಲಾ ಉಪ‌ನಿರ್ದೇಶಕ ಹೆಚ್ ಕೆ ಪಾಂಡು ಈ ಕುರಿತು ಮಾಹಿತಿ ನೀಡಿದ್ದು, ಟಾಪ್ ಟೆನ್ ಒಳಗೆ ಮೈಸೂರು ಜಿಲ್ಲೆ ಸ್ಥಾನ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಮುಂದಿನ ಬಾರಿ ಮೈಸೂರು ಜಿಲ್ಲೆಯನ್ನು ಮತ್ತಷ್ಟು ಉತ್ತುಂಗ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇವೆಂದು ಹೆಚ್ ಕೆ ಪಾಂಡು ವಿಶ್ವಾಸ ವ್ಯಕ್ತಪಡಿಸಿದರು.

Key words: SSLC, Result, Mysore district

Tags :

.