HomeBreaking NewsLatest NewsPoliticsSportsCrimeCinema

SSLC Result: 625ಕ್ಕೆ 623 ಅಂಕ ಪಡೆದು ಕೀರ್ತಿ ತಂದ ಮೈಸೂರಿನ ವಿದ್ಯಾರ್ಥಿನಿ.

12:44 PM May 09, 2024 IST | prashanth

ಮೈಸೂರು,ಮೇ,9,2024 (www.justkannada.in): ರಾಜ್ಯದಲ್ಲಿ ನಡೆದಿದ್ದ 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಮೈಸೂರಿನ ವಿದ್ಯಾರ್ಥಿನಿಯೊಬ್ಬರು 625 ಕ್ಕೆ 623 ಅಂಕ ಪಡೆದು ಸಾಧನೆಗೈದಿದ್ದಾರೆ.

ಮೈಸೂರಿನ ವಿಜಯನಗರದಲ್ಲಿನ ಸದ್ವಿದ್ಯಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಧನ್ವಿ 625 ಕ್ಕೆ 623 ಅಂಕ ಪಡೆದು ಶಾಲೆಗೆ ಮತ್ತು ಮೈಸೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.  ಈ ಹಿನ್ನೆಲೆಯಲ್ಲಿ ಸದ್ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ವಿದ್ಯಾರ್ಥಿನಿ ಧನ್ವಿಗೆ ಪೋಷಕರು ಮತ್ತು ಶಿಕ್ಷಕರು ಸಿಹಿ ತಿನ್ನಿಸಿ ಶುಭ ಕೋರಿದರು.

ಈ ಬಗ್ಗೆ ಮಾಧ್ಯಮಕ್ಕೆ ಸಂತಸ ಹಂಚಿಕೊಂಡಿರುವ ವಿದ್ಯಾರ್ಥಿನಿ ಧನ್ವಿ, 623 ಅಂಕ ಬರುತ್ತೆ ಎಂಬ ವಿಶ್ವಾಸವಿತ್ತು. ನನ್ನ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ. ನನ್ನ ತಂದೆ ತಾಯಿನೇ ನನಗೆ ರೋಲ್ ಮಾಡೆಲ್. ನಾನು ಇಷ್ಟೊಂದು ಅಂಕ ಪಡೆಯಲಿಕ್ಕೆ ನನ್ನ ಪೋಷಕರು, ಶಿಕ್ಷಕರು ಎಲ್ಲರೂ ಪ್ರೋತ್ಸಾಹ ನೀಡಿದ್ದಾರೆ. ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿಲ್ಲ. ಪೋಷಕರ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಇನ್ನು ಮೈಸೂರಿನ ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸುದೀಕ್ಷಗೆ 625ಕ್ಕೆ 620 ಅಂಕ ಪಡೆದಿದ್ದಾರೆ. ಕನ್ನಡ ಸೇರಿ 5 ವಿಷಯದಲ್ಲಿ ಶೇ 100ರಷ್ಟು ಅಂಕ ಗಳಿಸಿದ್ದಾರೆ. ಸಂಸ್ಕೃತ 125 ಇಂಗ್ಲಿಷ್ 100 ಕನ್ನಡ 100 ವಿಜ್ಞಾನ 100 ಸಮಾಜ 100 ಗಣಿತದಲ್ಲಿ 95 ಅಂಕ ಗಳಿಸಿ ಮೈಸೂರಿನ ದಿನೇಶ್ ಅವರ ಪುತ್ರಿ ಸುದೀಕ್ಷ ಸಾಧನೆಗೈದಿದ್ದಾರೆ.

Key words: SSLC, Result, Mysore, student

Tags :
SSLC-Result-Mysore - student - scored -623 marks
Next Article