For the best experience, open
https://m.justkannada.in
on your mobile browser.

ಎಸ್ ಟಿ ನಿಗಮ ಅಕ್ರಮ ಕೇಸ್ ನಲ್ಲಿ ಮತ್ತೊಬ್ಬ ಸಚಿವರ ಹೆಸರು : ಅವರು ಅಪ್ಪಟ ಪ್ರಾಮಾಣಿಕ ವ್ಯಕ್ತಿ ಎಂದ  ಸಚಿವ ಎಂ.ಬಿ ಪಾಟೀಲ್

11:37 AM Jun 08, 2024 IST | prashanth
ಎಸ್ ಟಿ ನಿಗಮ ಅಕ್ರಮ ಕೇಸ್ ನಲ್ಲಿ ಮತ್ತೊಬ್ಬ ಸಚಿವರ ಹೆಸರು   ಅವರು ಅಪ್ಪಟ ಪ್ರಾಮಾಣಿಕ ವ್ಯಕ್ತಿ ಎಂದ  ಸಚಿವ ಎಂ ಬಿ ಪಾಟೀಲ್

ವಿಜಯಪುರ,ಜೂನ್,8,2024 (www.justkannada.in):  ಎಸ್ .ಟಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ಕೇಳಿ ಬಂದಿದ್ದು ಈ ಕುರಿತು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಸಚಿವ ಶರಣ ಪ್ರಕಾಶ್ ಪಾಟಿಲ್ ಒಬ್ಬ ಅಪ್ಪಟ ಪ್ರಾಮಾಣಿಕ ವ್ಯಕ್ತಿ.  ಈ ಮಾತನ್ನ ಬಹಳ ಗರ್ವದಿಂದ ಹೇಳುತ್ತೇನೆ. ಸಾಕ್ಷ್ಯ ನಾಶ ಮಾಡುವಂತಹ ಕೆಲಸಕ್ಕೆ ಅವರು ಹೋಗಲ್ಲ. ದಯವಿಟ್ಟು ಶರಣ ಪ್ರಕಾಶ್  ಪಾಟೀಲ್ ಹೆಸರು ತಳಕು ಹಾಕಬೇಡಿ ಎಂದು ಮನವಿ ಮಾಡಿದರು.

ವಾಲ್ಮೀಕಿ ಅಭಿವೃದ್ದಿ ನಿಗದಮ ಎಂಡಿ ಒಬ್ಬ ಫ್ರಾಡ್ . ಶರಣ ಪ್ರಕಾಶ್ ಪಾಟೀಲ್ ಪ್ರಮಾಣಿಕ ವ್ಯಕ್ತಿ ಸಾಕ್ಷಾನಾಶ  ಭ್ರಷ್ಟಾಚಾರ ಮಾಡಿಲ್ಲ ಎಂದರು.

Key words: ST Corporation –illegal- case-Minister- MB Patil

Tags :

.