For the best experience, open
https://m.justkannada.in
on your mobile browser.

ಯಾವುದೇ ಹಗರಣ ನಡೆಯಲು ನಾವು ಬಿಡಲ್ಲ: ಸಿಐಡಿ ತನಿಖೆ ವರದಿ ಬರಲಿ- ಸಚಿವ ಪ್ರಿಯಾಂಕ್ ಖರ್ಗೆ.

12:08 PM May 29, 2024 IST | prashanth
ಯಾವುದೇ ಹಗರಣ ನಡೆಯಲು ನಾವು ಬಿಡಲ್ಲ  ಸಿಐಡಿ ತನಿಖೆ ವರದಿ ಬರಲಿ  ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಮೇ,29,2024 (www.justkannada.in): ಭ್ರಷ್ಟಾಚಾರ ಕುರಿತು ಆರೋಪಿಸಿ ಎಸ್ ಟಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಹಗರಣ ನಡೆಯಲು ನಾವು ಬಿಡಲ್ಲ. ಸಿಐಡಿ ತನಿಖೆಯಲ್ಲಿ ಸತ್ಯಾಸತ್ಯತೆ ಹೊರ ಬರಲಿ ಎಂದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ,  ಸಚಿವ ನಾಗೇಂದ್ರ ಸ್ಪಷ್ಟವಾಗಿ ಹೇಳಿದ್ದಾರೆ.  ಸಿಐಡಿ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿ. ಯಾವುದ ಹಗರಣ ನಡೆಯಲು ನಾವು ಬಿಡಲ್ಲ. ಕೆಲವು ಹೆಸರುಗಳು ಡೆತ್ ನೋಟ್ ನಲ್ಲಿವೆ. ಮೌಖಿಕ ಆದೇಶದ ಮೇಲೆ ಸರ್ಕಾರ ನಡೆಯಲ್ಲ. ಹಣ ವರ್ಗಾವಣೆ ಆಗಲ್ಲ. ಇಬ್ಬರು ಸಿಬ್ಬಂದಿ ಎಂಡಿ ಮೇಲೆ ಆರೋಪವಿದೆ. ಪ್ರಕರಣದಲ್ಲಿ ಪ್ರಾಥಮಿಕ ವರದಿ ಬರಲಿ. ಆಮೇಲೆ ನೋಡಣ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಅವರ ಕಾಲದಲ್ಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು.  ಶ್ರೀರಾಮಸೇನೆ ಹರೀಶ್ ಪೂಂಜಾ ಇಂಥವರಿಂದಲೇ ಹಾಳಾಗಿದೆ. ಇಂಥವರಿಂದಲೇ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ.  ಅವರು ಕಟ್ಟಿ ಬೆಳೆಸಿದವರೇ ದಾಂಧಲೆ ಮಾಡ್ತಿದ್ದಾರೆ ಬಿಜೆಪಿಯವರ ಕಾಲದಲ್ಲಿ ಆದ ಘಟನೆಗಳ ಬಗ್ಗೆ ಗೊತ್ತಿಲ್ವಾ ಎಂದು ಕಿಡಿಕಾರಿದರು.

Key words: ST, corporation, officer, suicide, Priyank Kharge

Tags :

.