For the best experience, open
https://m.justkannada.in
on your mobile browser.

ಎಸ್.ಟಿ ನಿಗಮ ಹಗರಣ: ಸಿಬಿಐಗೆ ವಹಿಸುವ ಪ್ರಶ್ನೆಯೇ ಬರಲ್ಲ- ಸಚಿವ ಸತೀಶ್ ಜಾರಕಿಹೊಳಿ.

06:14 PM Jun 03, 2024 IST | prashanth
ಎಸ್ ಟಿ ನಿಗಮ ಹಗರಣ  ಸಿಬಿಐಗೆ ವಹಿಸುವ ಪ್ರಶ್ನೆಯೇ ಬರಲ್ಲ  ಸಚಿವ ಸತೀಶ್ ಜಾರಕಿಹೊಳಿ

ಚಿಕ್ಕೋಡಿ,ಜೂನ್,3,2024 (www.justkannada.in): ಎಸ್ ಟಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮತ್ತು ಹಣ ವರ್ಗಾವಣೆ ಹಗರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿರುವ ಬಿಜೆಪಿಗೆ ಲೋಕೋಪಯೋಗಿ ಇಲಾಖೆ ಸಚವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ಬಿಜೆಪಿ ಆರೋಪ ಮಾಡುತ್ತಿದೆ ಎಂದು ರಾಜೀನಾಮೆ ಪಡೆಯಲು ಆಗಲ್ಲ ಎಸ್ಐಟಿ ಮಧ್ಯಂತರ ವರದಿ ನೀಡಿದ ಮೇಲೆ ಸಿಎಂ ಅದನ್ನ ಗಮನಿಸುತ್ತಾರೆ. ಯಾರೋ ಆರೋಪ ಮಾಡಿದರು ಅಂತಾ ರಾಜೀನಾಮೆ ಕೊಡಿಸಲು ಆಗಲ್ಲ ಎಂದರು.

ಪ್ರಕರಣ ಸಿಬಿಐಗೆ ವಹಿಸುವ ಪ್ರಶ್ನೆಯೇ ಬರಲ್ಲ. ಎಸ್ ಐಟಿ ಮಾಡುವಂತಹ ತನಿಖೆಯನ್ನ ಸಿಬಿಐ ಮಾಡುತ್ತದೆ. ಈ ಪ್ರಕರಣದಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Key words: ST Corporation, Scam, Minister, Sathish Jarakiholi

Tags :

.