HomeBreaking NewsLatest NewsPoliticsSportsCrimeCinema

ಎಸ್ ಟಿ ನಿಗಮದಲ್ಲಿ ಹಗರಣ: ಇಬ್ಬರು ಅಧಿಕಾರಿಗಳು ಎಸ್ ಐಟಿ ವಶಕ್ಕೆ.

11:00 AM Jun 01, 2024 IST | prashanth
ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ ಪದ್ಮಾನಾಭ್‌

ಬೆಂಗಳೂರು,ಜೂನ್,1,2024 (www.justkannada.in):  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ  ಕೋಟಿ ಕೋಟಿ ರೂ.ಹಗರಣಕ್ಕೆ ಸಂಬಂಧಿಸಿದಂತೆ  ತನಿಖೆ ನಡೆಸುತ್ತಿರುವ ಎಸ್‌ ಐಟಿ ಅಧಿಕಾರಿಗಳು ಇದೀಗ ಇಬ್ಬರು ಅಧಿಕಾರಿಗಳನ್ನ ವಶಕ್ಕೆ ಪಡೆದಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ ಪದ್ಮಾನಾಭ್‌ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧಿಕಾರಿ ಪರಶುರಾಮರನ್ನು ಎಸ್‌ ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ ಪದ್ಮಾನಾಭ್‌

ವಾಲ್ಮೀಕಿ ನಿಗಮ‌ದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ, ಮತ್ತು ಹಣ ವರ್ಗಾವಣೆ ಆರೋಪ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ನಿನ್ನೆ ವಿಶೇಷ ತನಿಖಾ ತಂಡ ರಚಿಸಿ ಆದೇಶ ಹೊರಡಿಸಿತ್ತು. ಈ  ಬೆನ್ನಲ್ಲೇ ಇದೀಗ ಇಬ್ಬರನ್ನು ಎಸ್‌ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದೆ.

Key words: ST Corporation, Two officers, arrested, SIT

Tags :
arrestedScam -ST Corporation- Two officerssit
Next Article