For the best experience, open
https://m.justkannada.in
on your mobile browser.

ರಾಜ್ಯದ ವಾಹನ ಸವಾರರಿಗೆ ಶಾಕ್: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದ ಸರ್ಕಾರ.

04:58 PM Jun 15, 2024 IST | prashanth
ರಾಜ್ಯದ ವಾಹನ ಸವಾರರಿಗೆ ಶಾಕ್  ಪೆಟ್ರೋಲ್  ಡೀಸೆಲ್ ಬೆಲೆ ಹೆಚ್ಚಿಸಿದ ಸರ್ಕಾರ

ಬೆಂಗಳೂರು,ಜೂನ್, 15,2024 (www.justkannada.in): ಲೋಕಸಭೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟದ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡುವ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದೆ. ರಾಜ್ಯಾದ್ಯಂತ ಪ್ರತಿ ಲೀಟರ್‌ ಪ್ರೆಟೋಲ್‌ ದರವನ್ನು 3 ರೂ. ಹಾಗೂ ಡೀಸೆಲ್‌ ದರನ್ನು 3.50 ರೂ. ಹೆಚ್ಚಿಸಿ ಆದೇಶ ಹೊರಡಿಸಿದೆ.   ಇದರಿಂದ ಇನ್ಮುಂದೆ ಪೆಟ್ರೋಲ್‌ ದರ ಲೀಟರ್‌ಗೆ 103 ರೂ. ಹಾಗೂ ಡೀಸೆಲ್‌ 91 ರೂ. 50 ಪೈಸೆ ಆಗಲಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂ. ಹೊಂದಿಸಲು ಸರ್ಕಾರ ತೀವ್ರ ಹೆಣಗಾಟ ನಡೆಸುತ್ತಿದ್ದು,  ಗ್ಯಾರಂಟಿಗಳ ಜತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಒತ್ತಡವೂ ಸ್ವಪಕ್ಷದ ಶಾಸಕರಿಂದಲೇ ಹೆಚ್ಚತೊಡಗಿದೆ. ಇದೀಗ ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸುವ ಮೂಲಕ ರಾಜ್ಯದ  ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದೆ.

Key words: state Govt –hiked- petrol- diesel -prices

Tags :

.