ರಾಹುಲ್ ಗಾಂಧಿ ಭಾರತ್ ನ್ಯಾಯ ಯಾತ್ರೆಗೆ ತಡೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿ.
12:14 PM Jan 23, 2024 IST
|
prashanth
ಪಿಎಸ್ ಐ ನೇಮಕಾತಿ ಹಗರಣ ಕುರಿತು ತನಿಖಾ ವರದಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ರಾಜ್ಯ ಸರ್ಕಾರ ವರದಿಯನ್ನ ಪರಿಶೀಲಿಸುತ್ತೆ. ವರದಿಯಲ್ಲಿ ಯಾರ ಹೆಸರಿದೆ ಎಂದು ನೋಡಿಲ್ಲ ನಾವೆಲ್ಲ ಕುಳತು ವರದಿ ವಿಶ್ಲೇಷಣೆ ಮಾಡುತ್ತೇವೆ ಎಂದರು.
ಬೆಂಗಳೂರು,ಜನವರಿ,23,2024(www.justkannada.in): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ನ್ಯಾಯಯಾತ್ರೆಗೆ ಅಸ್ಸಾಂನಲ್ಲಿ ತಡೆಯೊಡ್ಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಡಾ.ಜಿ.ಪರಮೇಶ್ವರ್, ಉದ್ದೇಶಪೂರ್ವಕವಾಗಿ ಭಾರತ್ ನ್ಯಾಯ ಯಾತ್ರೆ ತಡೆದು ಗಲಾಟೆ ಮಾಡಿದ್ದಾರೆ. ಅಸ್ಸಾಂ ಸಿಎಂ ಯಾತ್ರೆ ತಡೆದು ಗಲಾಟೆ ಮಾಡಿಸಿದ್ದಾರೆ. ಜನರಿಗೆ ಶಾಂತಿ ಸಂದೇಶ ನೀಡಲು ಬಿಡುತ್ತಿಲ್ಲ. ಇದನ್ನ ಖಂಡಿಸಿ ಇಡೀ ದೇಶದಲ್ಲಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಪಿಎಸ್ ಐ ನೇಮಕಾತಿ ಹಗರಣ ಕುರಿತು ತನಿಖಾ ವರದಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ರಾಜ್ಯ ಸರ್ಕಾರ ವರದಿಯನ್ನ ಪರಿಶೀಲಿಸುತ್ತೆ. ವರದಿಯಲ್ಲಿ ಯಾರ ಹೆಸರಿದೆ ಎಂದು ನೋಡಿಲ್ಲ ನಾವೆಲ್ಲ ಕುಳತು ವರದಿ ವಿಶ್ಲೇಷಣೆ ಮಾಡುತ್ತೇವೆ ಎಂದರು.
Key words: Stop - Bharat Nyaya Yatra- Home Minister- Dr. G. Parameshwar
Next Article