For the best experience, open
https://m.justkannada.in
on your mobile browser.

ತಂತ್ರ,, ಮಂತ್ರ, ಕುತಂತ್ರ ಅವರಿಗೆ ಹೊಸದೇನೆಲ್ಲ: ಅದೆಲ್ಲಾ ರೂಢಿಯಾಗಿದೆ- ಸಂಸದ ಡಿ.ಕೆ ಸುರೇಶ್.

03:10 PM May 31, 2024 IST | prashanth
ತಂತ್ರ   ಮಂತ್ರ  ಕುತಂತ್ರ ಅವರಿಗೆ ಹೊಸದೇನೆಲ್ಲ  ಅದೆಲ್ಲಾ ರೂಢಿಯಾಗಿದೆ  ಸಂಸದ ಡಿ ಕೆ ಸುರೇಶ್

ಬೆಂಗಳೂರು,ಮೇ,31,2024 (www.justkannada.in): ನನ್ನ ವಿರುದ್ದ ಶತ್ರು ಭೈರವಿಯಾಗ ನಡೆಸಿ ಪಂಚಬಲಿ ಕೊಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಯನ್ನ ಅವರ ತಮ್ಮ ಸಂಸದ ಡಿ.ಕೆ ಸುರೇಶ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಡಿ.ಕೆ ಸುರೇಶ್, ರಾಜ್ಯದ ಕೆಲ ರಾಜಕಾರಣಿಗಳು ಅಥವಾ ಒಂದು ಪಕ್ಷ ಮೊದಲಿಂದಲೂ ಬಲಿ ಕೊಡುವುದರಲ್ಲಿ, ಬಲಿಯಜ್ಞ ಮಾಡಿಸುವುದರಲ್ಲಿ ಹೆಸರುವಾಸಿ. ತಂತ್ರ, ಮಂತ್ರ,ಕುತಂತ್ರ-ಅವರಿಗೆ ಹೊಸದೇನಲ್ಲಾ. ಅದು ಅವರಿಗೆ ರೂಢಿಯಾಗಿದೆ, ಅವರ ಹೆಸರುಗಳನ್ನು ತಾನು ಹೇಳಲ್ಲ  ಮಾಧ್ಯಮದವರು ಅರ್ಥಮಾಡಿಕೊಳ್ಳಬೇಕು ಎಂದರು.

ವಿಪಕ್ಷಗಳಿಗೆ ಡಿಕೆ ಶಿವಕುಮಾರ್ ಟಾರ್ಗೆಟ್ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್ , ರಾಜಕಾರಣವೇ ಶಿವಕುಮಾರ್ ಸುತ್ತ ತಿರುಗುತ್ತಿರುತ್ತದೆ, ಶಿವಕುಮಾರ್ ಹೆಸರು ಹೇಳದೆ ಅವರ ಬೇಳೆ ಬೇಯಲ್ಲ, ಜನಕ್ಕೆ ಎಲ್ಲ ಗೊತ್ತಾಗುತ್ತಿದೆ, ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

Key words: Strategy, DCM, DK Shivakumar, MP, DK Suresh

Tags :

.