For the best experience, open
https://m.justkannada.in
on your mobile browser.

ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು- ನ್ಯೂಸ್ ಫಸ್ಟ್ ಸಿಇಒ ಎಸ್.  ರವಿಕುಮಾರ್

10:20 AM Dec 02, 2023 IST | prashanth
ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು  ನ್ಯೂಸ್ ಫಸ್ಟ್ ಸಿಇಒ ಎಸ್   ರವಿಕುಮಾರ್

ಬೆಂಗಳೂರು,ಡಿಸೆಂಬರ್,2,2023(www.justkannada.in): ಉತ್ತಮ ಪತ್ರಕರ್ತರಾಗಬೇಕಾದರೆ  ವಿದ್ಯಾರ್ಥಿಗಳು ಪ್ರತಿನಿತ್ಯ ಸುದ್ದಿಗಳನ್ನು ಗಮನಿಸುವುದನ್ನ, ಓದುವುದನ್ನ ಕಲಿಯಬೇಕು. ಮಾಧ್ಯಮ ಪ್ರತಿದಿನವೂ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಬದಲಾಗಬೇಕು"  ಎಂದು ಪತ್ರಕರ್ತ, ನ್ಯೂಸ್ ಫಸ್ಟ್ ಕನ್ನಡ  ಸುದ್ದಿ ವಾಹಿನಿಯ ಎಂ.ಡಿ. ಮತ್ತು ಸಿಇ ಓ ಎಸ್. ರವಿಕುಮಾರ್ ಅವರು ಅಭಿಪ್ರಾಯಪಟ್ಟರು.

ನ್ಯಾಷನಲ್ ಕಾಲೇಜು ಜಯನಗರದ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ  ' ಪ್ರೆಸೆಂಟ್ ಡೇ ಜರ್ನಲಿಸಂ: ಸ್ಕೋಪ್ ಅಂಡ್ ಅಪಾರ್ಚುನಿಟೀಸ್ ' ವಿಷಯದ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ನಡೆಸಿದ  ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  "ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಂಥ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿವೆ. ಮಾಧ್ಯಮಗಳ ಸಂಖ್ಯೆಯೂ ಏರುತ್ತಿದೆ. ಇದು ಮುಂದಿನ ಪೀಳಿಗೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ" ಎಂದರು.

ಇದೇ ವೇಳೆ ತೃತೀಯ ಸೆಮಿಸ್ಟರ್ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂದರ್ಶನ ಲೇಖನಗಳ 'ಅಂತರಂಗ' ಮ್ಯಾಗಜಿನ್ ಅನ್ನು  ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಡಾ.ಎಚ್.ಎನ್. ಸುಬ್ರಹ್ಮಣ್ಯ, ಕಾರ್ಯದರ್ಶಿಗಳಾದ ವಿ. ವೆಂಕಟಾಶಿವಾರೆಡ್ಡಿ, ನ್ಯಾಷನಲ್ ಕಾಲೇಜಿನ ಚೇರ್ಮನ್ ಡಾ. ಪಿ.ಎಲ್. ವೆಂಕಟರಾಮ ರೆಡ್ಡಿ  ಪದವಿ ಕಾಲೇಜಿನ  ಪ್ರಾಂಶುಪಾಲರಾದ ಡಾ.ಬಿ.ಸುರೇಶ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ  ಡಾ. ವೈಶಾಲಿ ಎಚ್.ಬಿ. ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words: Students - habit - read newspapers - News First CEO- S. Ravikumar

Tags :

.