For the best experience, open
https://m.justkannada.in
on your mobile browser.

ಫೋಟೋಗೆ ಫೋಸ್‌ ನೀಡಿ ʼ ಬಕ್ರಾʼ ಆದ ಪೊಲೀಸರು ಇದೀಗ ಸಸ್ಪೆಂಡ್‌ ..!

03:45 PM Feb 10, 2024 IST | mahesh
ಫೋಟೋಗೆ ಫೋಸ್‌ ನೀಡಿ ʼ ಬಕ್ರಾʼ ಆದ ಪೊಲೀಸರು ಇದೀಗ ಸಸ್ಪೆಂಡ್‌

ಮುಂಬೈ , ಫೆ.೧೦, ೨೦೨೪ : ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಒರ್ವ ಸಬ್‌ ಇನ್ಸ್‌ ಪೆಕ್ಟರ್‌ ಅಮಾನತು ಸೇರಿದಂತೆ ೮ ಮಂದಿ ಕಾನ್‌ಸ್ಟೆಬಲ್‌ಗಳನ್ನು ಒಂದೇ ದಿನ ವರ್ಗಾವಣೆ ಮಾಡಲಾಗಿದೆ.

ಈ ವರ್ಗಾವಣೆಗೆ ಕಾರಣ ತುಂಬಾ ಇಂಟರೆಸ್ಟಿಂಗ್‌ ಆಗಿದೆ. 'ಬಕ್ರಾ' (ಗಂಡು ಮೇಕೆ) ಯನ್ನು  ಪೊಲೀಸ್ ಠಾಣೆಗೆ ತಂದು ಅದರೊಂದಿಗೆ ಪೋಸ್ ನೀಡಿದ ಆರೋಪದ ಮೇಲೆ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಮತ್ತು ಎಂಟು ಕಾನ್‌ಸ್ಟೆಬಲ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ಪ್ರದೇಶದಲ್ಲಿನ ಅಪರಾಧ ಪ್ರಮಾಣವನ್ನು ಕಡಿಮೆ ಮಾಡಲು ಅವರು ಪ್ರಾಣಿ ಬಲಿ ಮಾಡಿದ್ದಾರೆ ಎಂದು ಪೊಲೀಸರು ಪ್ರಾಣಿಯೊಂದಿಗಿನ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.

ಆದರೆ,  ಈ ವಿಷಯಕ್ಕೂ ಮೂಢನಂಬಿಕೆಗೂ ಯಾವುದೇ ಸಂಬಂಧವಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಉದ್ಗೀರ್ ಗ್ರಾಮಾಂತರ ಪೊಲೀಸ್ ಠಾಣೆಯ ಒಂಬತ್ತು ಪೊಲೀಸರು ಕ್ರಮವನ್ನು ಎದುರಿಸಿದ್ದಾರೆ.  ಏಕೆಂದರೆ ಅವರು ಸಮವಸ್ತ್ರದಲ್ಲೇ   ಮೇಕೆ ಜತೆಗೆ ಪೋಸ್ ನೀಡಿದ್ದು ನಿಮಯ ಉಲ್ಲಂಘನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಠಾಣೆಯ ಸಹೋದ್ಯೋಗಿಯೊಬ್ಬರು ಹೊಸ ಕಾರನ್ನು ಖರೀದಿಸಿದ ನಂತರ ಮೇಕೆಯನ್ನು ಪಾರ್ಟಿಗಾಗಿ ಪೊಲೀಸ್ ಠಾಣೆಗೆ ಕರೆತರಲಾಯಿತು. ಆಗಲೇ ಇತರೆ ಸಹೊದ್ಯೋಗಿಗಳು ಫೋಟೋಗೆ ಪೋಸ್‌ ನೀಡಿದ್ದು  ಎಂದು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಪೊಲೀಸರ ವರ್ತನೆಯನ್ನು ಅನುಚಿತ ಎಂದು ವಿವರಿಸಿದ ಫಡ್ನವಿಸ್, ಅವರ ವಿರುದ್ಧ ಕ್ರಮಕ್ಕೆ ಆದೇಶ ನೀಡಲಾಗಿದೆ ಎಂದಿದ್ದಾರೆ.

Key words :  sub-inspector ̲ suspended ̲ eight constables ̲ transferred ̲ allegedly bringing a 'bakra'̤ ̲ police station ̲ Maharashtra’s ̲  Latur district

source : ಟೈಮ್ಸ್‌ ನೌ

english summary :

A sub-inspector was suspended and eight constables were transferred for allegedly bringing a 'bakra' or ‘bokad’ (male goat) to their police station and posing with it in Maharashtra’s Latur district

Tags :

.