For the best experience, open
https://m.justkannada.in
on your mobile browser.

ಕೌನ್ಸೆಲಿಂಗ್ ಮೂಲಕವೇ ಸಬ್ ರಿಜಿಸ್ಟ್ರಾರ್‌ ವರ್ಗಾವಣೆ : ಸರಕಾರದ ಮಹತ್ವದ ನಿರ್ಧಾರ.

02:29 PM Jul 05, 2024 IST | mahesh
ಕೌನ್ಸೆಲಿಂಗ್ ಮೂಲಕವೇ ಸಬ್ ರಿಜಿಸ್ಟ್ರಾರ್‌ ವರ್ಗಾವಣೆ   ಸರಕಾರದ ಮಹತ್ವದ ನಿರ್ಧಾರ

Bengaluru sub-registrars to be transferred through counselling, cabinet decides

ಬೆಂಗಳೂರು, ಜು.05,2024: (www.justkannada.in news) ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ  ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳ ವರ್ಗಾವಣೆಗೆ ಹೊಸ ಮಾರ್ಗ ಜಾರಿಗೆ ತಂದ ಸರಕಾರ.

ರಾಜ್ಯದ ಬೊಕ್ಕಸಕ್ಕೆ ಬೆಂಗಳೂರು ಆದಾಯದಲ್ಲಿ ಸಿಂಹಪಾಲು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಸಬ್‌ ರಿಜಿಸ್ಟ್ರಾರ್‌ ವರ್ಗಾವಣೆಗೆ ಭಾರಿ ಬೇಡಿಕೆ, ವಶೀಲಿ ಹಾಗೂ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಕ್ರಮ ಕಂಡುಕೊಂಡಿದೆ.

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ವ್ಯಾಪ್ತಿಯಲ್ಲಿ ಕಳೆದ ಎಂಟು ವರ್ಷಗಳಿಂದ ಐದು ವರ್ಷ ಸೇವೆ ಸಲ್ಲಿಸಿದವರಿಗೆ ಮತ್ತು ತಾಲ್ಲೂಕಿನಲ್ಲಿ ಬಿಎಂಆರ್‌ಡಿಎ ಹೊರಗಿನ 10 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದವರಿಗೆ ಕೌನ್ಸೆಲಿಂಗ್ ಅನ್ವಯಿಸುತ್ತದೆ.

ಒಂದೇ ಸ್ಥಳದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ ಎಫ್ಡಿಎಗಳಿಗೂ ಅನ್ವಯವಾಗುತ್ತದೆ.  ಜೂನ್ 25, 2024 ರಂದು ಹೊರಡಿಸಲಾದ ವರ್ಗಾವಣೆ ಮಾರ್ಗಸೂಚಿಗಳನ್ನು ಸಡಿಲಿಸುವ ಮೂಲಕ ಆಗಸ್ಟ್ 10, 2024 ರೊಳಗೆ ಕೌನ್ಸೆಲಿಂಗ್ ಅನ್ನು ಮುಕ್ತಾಯಗೊಳಿಸಬೇಕು.

ರಾಜ್ಯಾದ್ಯಂತ 257 ಸಬ್-ರಿಜಿಸ್ಟ್ರಾರ್ ಕಚೇರಿಗಳಿವೆ, ಅವುಗಳಲ್ಲಿ 51 ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ BMRDA ಅಧಿಕಾರ ವ್ಯಾಪ್ತಿಗೆ ಬರುತ್ತವೆ.

key words:  Bengaluru, sub-registrars, to be transferred, though, counselling, cabinet decides

Tags :

.