HomeBreaking NewsLatest NewsPoliticsSportsCrimeCinema

ಸಮಾವೇಶಗಳ ಸಕ್ಸಸ್ ಸಿದ್ದರಾಮಯ್ಯಗೆ ಪ್ಲಸ್: ಇಂದು ಎದುರಾಳಿಗಳಿಗೆ ಕೊಡ್ತಾರಾ ಖಡಕ್ ಸಂದೇಶ

11:15 AM Aug 09, 2024 IST | prashanth

ಮೈಸೂರು,ಆಗಸ್ಟ್,9,2024 (www.justkannada.in):   ಮುಡಾ ಹಗರಣ ವಿರೋಧಿಸಿ ಬಿಜೆಪಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ವಿರೋಧವಾಗಿ ಇಂದು ಮೈಸೂರಿನಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಯುತ್ತಿದ್ದು ಸಮಾವೇಶದಲ್ಲಿ ತಮ್ಮ ಎದುರಾಳಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸಂದೇಶ ರವಾನಿಸಲಿದ್ದಾರೆ.

ಸಮಾವೇಶಗಳ ಸಕ್ಸಸ್ ಸಿಎಂ ಸಿದ್ದರಾಮಯ್ಯಗೆ ಪ್ಲಸ್ ಆಗಿದ್ದು, ಸಿದ್ದರಾಮಯ್ಯ ರಾಜಕೀಯ ಸಂಕಷ್ಟದಲ್ಲಿದ್ದಾಗ ಪ್ರತಿ ಬಾರಿಯು ಸಮಾವೇಶಗಳು ಕೈ ಹಿಡಿದಿವೆ. ಈ ಹಿಂದೆ ಜೆಡಿಎಸ್ ನಿಂದ ವಜಾಗೊಳಿಸಿದಾಗ ಅಹಿಂದ ಸಮಾವೇಶ ನಡೆಸಿದ್ದ ಸಿಎಂ ಸಿದ್ದರಾಮಯ್ಯ  ಈ ಮೂಲಕ ಹಿಂದುಳಿದ ವರ್ಗದ ನಾಯಕನಾಗಿ ಹೊರಹೊಮ್ಮಿದರು. ಅಹಿಂದ ಸಮಾವೇಶ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ನೀಡಿತ್ತು. ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

ಇದಾದ ನಂತರ ಬಳ್ಳಾರಿ ಪಾದಯಾತ್ರೆ ಮಾಡಿ ಮತ್ತೊಮ್ಮೆ ಶೈನ್ ಆಗಿದ್ದ ಸಿದ್ದರಾಮಯ್ಯ ಈ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದರು.  ಬಳ್ಳಾರಿ ಪಾದಯಾತ್ರೆ  ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆಗಲು ಪ್ರಭಾವ ಬೀರಿತ್ತು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಳ್ಳಾರಿ ಪಾದಯಾತ್ರೆ ಬಳಿಕ ಸಮಾವೇಶ ನಡೆಸಿದ್ದರು.

ಇದಾದ ಬಳಿಕ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಸಮಾವೇಶ ನಡೆಸಿದ್ದರು. ಈ ಬೃಹತ್ ಸಮಾವೇಶದ ಮೂಲಕ ಹೈಕಮಾಂಡ್ ಗೆ ತನ್ನ ಪರವಾದ ಜನ ಬೆಂಬಲವನ್ನ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರು.

ಸಿದ್ದರಾಮೋತ್ಸವ ಬೃಹತ್ ಸಮಾವೇಶ ಎರಡನೇ ಬಾರಿಗೆ  ಸಿದ್ದರಾಮಯ್ಯ ಸಿಎಂ ಆಗಲು ಪ್ರಮುಖ ಕಾರಣವಾಗಿತ್ತು. ಹೀಗೆ ಸಮಾವೇಶಗಳ  ರಿಸಲ್ಟ್ ನಲ್ಲಿ ಸಿದ್ದರಾಮಯ್ಯ ಸಕ್ಸಸ್ ಕಂಡಿದ್ದಾರೆ. ಇದೀಗ ಇಂದು ನಡೆಯುತ್ತಿರುವ ಜನಾಂದೋಲನ ಸಮಾವೇಶ ರಾಜಕೀಯ ಸಂಧ್ಯಾಕಾಲದ್ದಲ್ಲಿ ಸಿದ್ದರಾಮಯ್ಯ ಕೈ ಹಿಡಿಯಲಿದಿಯೇ ಕಾದು ನೋಡಬೇಕಿದೆ. ಇಂದಿನ  ಜನಾಂದೋಲನ ಸಮಾವೇಶದ ಮೂಲಕ ಎದುರಾಳಿಗಳಿಗೆ ಪ್ರಮುಖ ಸಂದೇಶ ನೀಡಲಿದ್ದಾರೆ.

Key words: success, conventions, plus, Siddaramaiah

Tags :
conventionsplusSiddaramaiahsuccess
Next Article