HomeBreaking NewsLatest NewsPoliticsSportsCrimeCinema

ಪರಿಷತ್‌ ಚುನಾವಣೆ: ಸುಮಲತಾ ಬಹುತೇಕ ಖಚಿತ, ಪ್ರತಾಪ್‌ ಸಿಂಹಗೆ ಮತ್ತೆ ನಿರಾಸೆ.

11:55 AM Jun 01, 2024 IST | mahesh

 

Incumbent Mandya MP Sumalatha Ambareesh, who did not contest the Lok Sabha elections this year, is likely to be among the three BJP nominees for the June 13 polls to elect 11 MLCs from the Assembly.

ಬೆಂಗಳೂರು, ಜೂ.01,2024: (www.justkannada.in news )ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಜೂನ್ 13 ರಂದು  ನಡೆಯುವ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ.

ವಿಧಾನಸಭೆಯಿಂದ 11 ಎಂಎಲ್‌ಸಿಗಳನ್ನು ಆಯ್ಕೆ ಮಾಡಲು ಬಿಜೆಪಿಯ ಮೂವರು ನಾಮನಿರ್ದೇಶಿತರಲ್ಲಿ ಸುಮಲತಾ ಹೆಸರು ಸೇರ್ಪಡೆಗೊಂಡಿದೆ.

ಎನ್‌ಡಿಎ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಮಂಡ್ಯ ಕ್ಷೇತ್ರವನ್ನು ತ್ಯಾಗ ಮಾಡಿದ ನಂತರ ಸುಮಲತಾ ಅವರನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. 66 ಶಾಸಕರನ್ನು ಹೊಂದಿರುವ ಬಿಜೆಪಿ ಮೂರು ಎಂಎಲ್‌ಸಿ ಸ್ಥಾನಗಳನ್ನು ಗೆಲ್ಲಲಿದೆ.

ಸುಮಲತಾ ಅವರಲ್ಲದೆ, ಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಪರಿಷತ್ ಚುನಾವಣೆಯಲ್ಲಿ ಸೋತಿದ್ದ ಪ್ರೊ.ಎಂ.ನಾಗರಾಜ್ ಅವರ ಹೆಸರನ್ನು ಸಹ ಅಭ್ಯರ್ಥಿಗಳ ಪಟ್ಟಿಗೆ ಸೇರಿಸಲಾಗಿದೆ.

ನಾಗರಾಜ್ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದಾಗ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಹೊರಟ್ಟಿಯವರು ಬಿಜೆಪಿ ಸೇರಿದ್ದರಿಂದ ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದರು.

30 ಆಕಾಂಕ್ಷಿಗಳಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ ಒಂಬತ್ತು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಈ ಪೈಕಿ  ಅಭ್ಯರ್ಥಿಗಳಲ್ಲಿ ನಳಿನ್‌ ಕುಮಾರ್ ಕಟೀಲ್, ಪ್ರತಾಪ ಸಿಂಹ,  ಜೆಸಿ ಮಾಧುಸ್ವಾಮಿ, ಸಿಟಿ ರವಿ, ಮಾಳವಿಕಾ ಅವಿನಾಶ್, ಗೀತಾ ವಿವೇಕಾನಂದ, ಸಿ ಮಂಜುಳಾ ಸೇರಿದ್ದಾರೆ.

key words: Council elections, Sumalatha, almost confirm, Pratap Simha, disappointed again.

SUMMARY:

Incumbent Mandya MP Sumalatha Ambareesh, who did not contest the Lok Sabha elections this year, is likely to be among the three BJP nominees for the June 13 polls to elect 11 MLCs from the Assembly.

Tags :
almost confirmcouncil electionsdisappointed again.Pratap SimhaSumalatha
Next Article