SC, ST ಒಳ ಮೀಸಲಾತಿಗೆ ಸುಪ್ರೀಂಕೋರ್ಟ್ ಒಪ್ಪಿಗೆ
12:06 PM Aug 01, 2024 IST | prashanth
ನವದೆಹಲಿ, ಆಗಸ್ಟ್, 1, 2024 (www.justkannada.in): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಳ ಮೀಸಲಾತಿಯಿಂದ ಸಮಾನತೆಗೆ ಧಕ್ಕೆಯಾಗಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಏಳು ನ್ಯಾಯಾಧೀಶರ ಪೀಠದಲ್ಲಿ 6:1 ಬಹುಮತದಿಂದ ಎಸ್.ಸಿ, ಎಸ್ ಟಿ ಒಳ ಮೀಸಲಾತಿಗೆ ಒಪ್ಪಿಗೆ ನೀಡಲಾಗಿದೆ. 7 ನ್ಯಾಯಮೂರ್ತಿಗಳ ಪೈಕಿ ನ್ಯಾ. ಬೇಲಾ ತ್ರಿವೇದಿ ಅವರು ಮಾತ್ರ ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದು , ಉಳಿದ 6 ನ್ಯಾಯಮೂರ್ತಿಗಳು ಒಳ ಮೀಸಲಾತಿ ಪರ ತೀರ್ಪು ನೀಡಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ವರ್ಗೀಕರಣಕ್ಕೆ ಅವಕಾಶವಿದೆ . ಒಳ ಮೀಸಲಾತಿಯಿಂದ ಸಮಾನತೆಯ ನಿಯಮ ಉಲ್ಲಂಘನೆಯಾಗಲ್ಲ. ಎಸ್ ಸಿ ಎಸ್ ಟಿ ಒಳ ಮೀಸಲಾತಿಯಿಂದ ಸಮಾನತೆಗೆ ಧಕ್ಕೆ ಇಲ್ಲ. ಉಪ ಪಂಗಡಗಳ ಮೀಸಲಾತಿಯಿಂದ ಸಮಾನತೆಗೆ ಸಮಸ್ಯೆ ಇಲ್ಲ. ಒಳ ಮೀಸಲಾತಿ ಕಾನೂನು ಬದ್ಧ ಎಂದು ಸುಪ್ರೀಂಕೋರ್ಟ್ ನ್ಯಾಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
Key words: Supreme Court, reservation, SC, ST